ಧಾರವಾಡ: ಜಿಲ್ಲೆಯಲ್ಲಿ ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಒಂದೇ ಫ್ಲ್ಯಾಟ್ ನಲ್ಲಿ ಇದ್ದಂತ ಬರೋಬ್ಬರಿ 18 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ.
ಧಾರವಾಡ ನಗರದಲ್ಲಿ ಖಚಿತ ಮಾಹಿತಿಯ ಮೇರೆಗೆ ಬಸವರಾಜ್ ದತ್ತನವರ್ ಎಂಬುವರ ಫ್ಲ್ಯಾಟ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯಲ್ಲಿ ಇರುವಂತ ಅರ್ನಾ ರೆಸಿಡೆನ್ಸಿಯಲ್ಲಿರುವಂತ ಬಸವರಾಜ್ ದತ್ತನವರ್ ಎಂಬುವರ ಫ್ಲ್ಯಾಟ್ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಐಟಿ ಅಧಿಕಾರಿಗಳ ದಾಳಿಯ ವೇಳೆಯಲ್ಲಿ ಒಂದೇ ಫ್ಲ್ಯಾಟ್ ನಲ್ಲಿ ಬರೋಬ್ಬರಿ 18 ಕೋಟಿ ಹಣ ಸಿಕ್ಕಿರೋದಾಗಿ ತಿಳಿದು ಬಂದಿದೆ. ಅದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನಕಲಿ ರಾಜಕೀಯ ಜಾಹೀರಾತಿನ ವಿರುದ್ಧ ನಟ ‘ಅಮೀರ್ ಖಾನ್’ ದೂರು, ‘FIR’ ದಾಖಲು