ಕಲಬುರ್ಗಿ: ನನ್ನ ಹೇಳಿಕೆಯಿಂದ ನೋವು, ವಿವಾದದ ಬಳಿಕ ನಾನು ಅಂದೇ ಕ್ಷಮೆ ಕೇಳಿದ್ದೇನೆ. ಈಗ ವೈಯಕ್ತಿಕವಾಗಿಯೂ ಕಲಬುರ್ಗಿ ಡಿಸಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ ಎಂಬುದಾಗಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದು ಹೈಕೋರ್ಟ್ ಸೂಚನೆಯ ಮೇರೆಗೆ ವಿಚಾರಣೆಗೆ ಹಾಜರಾಗಿದ್ದೆ. ನನ್ನನ್ನು ಅರೆಸ್ಟ್ ಮಾಡಬಾರದು ಎಂಬುದಾಗಿ ಕೋರ್ಟ್ ಹೇಳಿದೆ ಎಂದರು.
ನಾನು ದಲಿತರ ಅವಹೇಳನ ಮಾಡಿಲ್ಲ. ಆ ಬಗ್ಗೆ ವೀಡಿಯೋ ಇದೆ. ಕಲಬುರ್ಗಿ ಡಿಸಿಗೂ ನಾನು ಬೈದಿಲ್ಲ ಎಂದು ಹೇಳಿದ್ದೇನೆ. ಧರ್ಮದ ವಿಚಾರವಾಗಿ ನಾನು ಹೇಳಿಕೆಯನ್ನೂ ನೀಡಿಲ್ಲ. ನಾನು ಹೇಳಿಕೆ ನೀಡಿದ ಮರು ದಿನವೇ ಕ್ಷಮೆ ಕೇಳಿದ್ದೇನೆ ಎಂದರು.
ಕಲಬುರ್ಗಿ ಡಿಸಿಗೆ ಬೈದಿದ್ದೇನೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ನಾನು ಅವರಿಗೆ ವೈಯಕ್ತಿಕವಾಗಿಯೂ ಡಿಸಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ. ಕಲಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.