Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿವಾಹಿತ ಪುರುಷನ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

27/03/2026 5:19 PM

ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ

27/03/2026 5:16 PM

BREAKING : ‘ಜಗ್ ವಸಂತ’ : 45,000 ಮೆಟ್ರಿಕ್ ಟನ್ LPG ಹೊತ್ತು ಗುಜರಾತ್ ಬಂದರಿಗೆ ಮತ್ತೊಂದು ಹಡಗು ಆಗಮನ

27/03/2026 5:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ
KARNATAKA

ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ

By kannadanewsnow0927/03/2026 5:16 PM

ಶಿವಮೊಗ್ಗ: ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿನ ಒಬ್ಬನೇ ಒಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಟ್ಟಿರಲಿಲ್ಲ. ಆದರೆ ಇಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಿರ್ಲಕ್ಷ್ಯ ಧೋರಣೆಯಿಂದಾಗಿ ರೈತರು ಬೀದಿಗೆ ಬೀಳುವಂತಾಗಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾಗರ ತಾಲ್ಲೂಕಿನ ಅಂಬಾರಗೋಡ್ಲು ಸಮೀಪದ ಮುರಕ್ಕಿ ಗ್ರಾಮದ ರೈತ ಯೋಗರಾಜ್ ಎಂಬುವವರ ಬಗರ್‌ಹುಕುಂ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೆ ತೆರವುಗೊಳಿಸಿರುವುದನ್ನು ಖಂಡಿಸಿ, ಅಂಬಾರಗೋಡ್ಲು ಅರಣ್ಯ ಇಲಾಖೆ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಧರಣಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳ ದಬ್ಬಾಳಿಕೆಗೆ ಆಕ್ರೋಶ

ಘಟನೆಯ ಕುರಿತು ಮಾತನಾಡಿದ ಹಾಲಪ್ಪ ಅವರು, ಮುರಕ್ಕಿ ಗ್ರಾಮದ ಯೋಗರಾಜ್ ಕುಟುಂಬವು ಶರಾವತಿ ಮುಳುಗಡೆ ಸಂತ್ರಸ್ತರಾಗಿದ್ದು, ದಶಕಗಳಿಂದ ಇದೇ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬೇಲಿಯನ್ನು ಕಿತ್ತುಹಾಕಿ, ಮನೆಯಲ್ಲಿದ್ದ ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಮತ್ತು ದಬ್ಬಾಳಿಕೆ ನಡೆಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಷಡ್ಯಂತ್ರದ ಆರೋಪ ಮಾಡಿದ ಪ್ರಸ್ನ ಕೆರೆಕೈ

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ರೈತರನ್ನು ಒಕ್ಕಲೆಬ್ಬಿಸುವ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಕಾಡುಪ್ರಾಣಿಗಳಿಂದ ರೈತರ ಬೆಳೆ ನಾಶವಾಗುತ್ತಿದ್ದರೂ ಗಮನಹರಿಸದ ಅಧಿಕಾರಿಗಳು, ರೈತರನ್ನು ಜಮೀನಿನಿಂದ ಹೊರಹಾಕಲು ಉತ್ಸುಕತೆ ತೋರುತ್ತಿರುವುದು ಖಂಡನೀಯ ಎಂದರು.

ಶಾಸಕರ ಆಪ್ತ ಸಹಾಯಕರ ಹಸ್ತಕ್ಷೇಪದ ಬಗ್ಗೆ ಹಕ್ರೆ ಆರೋಪ

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಶಾಸಕರ ಆಪ್ತ ಸಹಾಯಕರ ಹಸ್ತಕ್ಷೇಪದ ಬಗ್ಗೆ ಗಂಭೀರ ಆರೋಪ ಮಾಡಿದರು. ಶಾಸಕರ ಆಪ್ತ ಸಹಾಯಕನ ಸೂಚನೆಯ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಇಂತಹ ಜನವಿರೋಧಿ ನೀತಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಧರಣಿ ಅಂತ್ಯ

ಮಲೆನಾಡು ರೈತ ಹೋರಾಟ ವೇದಿಕೆಯ ಸಂಚಾಲಕ ತೀ.ನ.ಶ್ರೀನಿವಾಸ್ ಹಾಗೂ ಬಿಜೆಪಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿ ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ತೀವ್ರ ವಾಗ್ಧಾಳಿ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಹಿರಿಯ ಅರಣ್ಯಾಧಿಕಾರಿಗಳು, ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಅಹೋರಾತ್ರಿ ಧರಣಿಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು

ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ನಗರ ಮಂಡಲದ ಅಧ್ಯಕ್ಷ ಗಣೇಶ ಪ್ರಸಾದ್, ಸುಧೀಂದ್ರ, ನಾಗರಾಜ್ ಬೊಬ್ಬಿಗೆ, ಮಂಜಯ್ಯ ಜೈನ್, ಅರುಣ ಕುಗ್ವೆ, ಪರಶುರಾಮ್, ವಿನೋದ್ ರಾಜ್, ಕೆ.ಜಿ.ಪ್ರಶಾಂತ್ ಸೇರಿದಂತೆ ನೂರಾರು ರೈತರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ರೈತರ ಹಿತರಕ್ಷಣೆಗಾಗಿ ಬಿಜೆಪಿ ನಡೆಸಿದ ಈ ಹೋರಾಟವು ಸಾಗರ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದ್ದು, ಆಡಳಿತ ಪಕ್ಷದ ವಿರುದ್ಧ ರೈತ ಸಮುದಾಯದ ಆಕ್ರೋಶಕ್ಕೆ ವೇದಿಕೆಯಾಯಿತು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಸಾಗರದಲ್ಲಿ RBD ಸೌಹಾರ್ದ ಸಹಕಾರ ಸಂಘ ಲೋಕಾರ್ಪಣೆ; ಕಚೇರಿಗೆ ಭೇಟಿ ನೀಡಿ ಶುಭ ಕೋರಿದ ಹರತಾಳು ಹಾಲಪ್ಪ

JOB ALERT: ನೀವು ‘SSLC ಪಾಸ್’ ಆಗಿದ್ದೀರಾ? ರೈಲ್ವೆ ಇಲಾಖೆಯ 11,127 ಹುದ್ದೆಗಳ ಭರ್ತಿಗೆ ತಪ್ಪದೇ ಅರ್ಜಿ ಸಲ್ಲಿಸಿ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು!

27/03/2026 5:01 PM1 Min Read

BREAKING : ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿ, ರಾಜ್ಯದಲ್ಲೂ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ : ಸಚಿವ ಮಧು ಬಂಗಾರಪ್ಪ

27/03/2026 4:51 PM2 Mins Read

ಸಾಗರದಲ್ಲಿ RBD ಸೌಹಾರ್ದ ಸಹಕಾರ ಸಂಘ ಲೋಕಾರ್ಪಣೆ; ಕಚೇರಿಗೆ ಭೇಟಿ ನೀಡಿ ಶುಭ ಕೋರಿದ ಹರತಾಳು ಹಾಲಪ್ಪ

27/03/2026 4:51 PM1 Min Read
Recent News

ವಿವಾಹಿತ ಪುರುಷನ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

27/03/2026 5:19 PM

ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ

27/03/2026 5:16 PM

BREAKING : ‘ಜಗ್ ವಸಂತ’ : 45,000 ಮೆಟ್ರಿಕ್ ಟನ್ LPG ಹೊತ್ತು ಗುಜರಾತ್ ಬಂದರಿಗೆ ಮತ್ತೊಂದು ಹಡಗು ಆಗಮನ

27/03/2026 5:16 PM

ಅಸಹನೀಯ ಮೊಣಕಾಲು ನೋವು ನಿವಾರಣೆಗೆ ಮನೆಯಲ್ಲಿ ಸಿಗುವ ಅದ್ಭುತ ನೋವು ನಿವಾರಕಗಳಿವು.!

27/03/2026 5:05 PM
State News
KARNATAKA

ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ: ಮಾಜಿ ಸಚಿವ ಹರತಾಳು ಹಾಲಪ್ಪ

By kannadanewsnow0927/03/2026 5:16 PM KARNATAKA 2 Mins Read

ಶಿವಮೊಗ್ಗ: ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿನ ಒಬ್ಬನೇ ಒಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಟ್ಟಿರಲಿಲ್ಲ. ಆದರೆ ಇಂದು ಜಿಲ್ಲಾ ಉಸ್ತುವಾರಿ ಸಚಿವರು…

BREAKING : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು!

27/03/2026 5:01 PM

BREAKING : ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿ, ರಾಜ್ಯದಲ್ಲೂ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ : ಸಚಿವ ಮಧು ಬಂಗಾರಪ್ಪ

27/03/2026 4:51 PM

ಸಾಗರದಲ್ಲಿ RBD ಸೌಹಾರ್ದ ಸಹಕಾರ ಸಂಘ ಲೋಕಾರ್ಪಣೆ; ಕಚೇರಿಗೆ ಭೇಟಿ ನೀಡಿ ಶುಭ ಕೋರಿದ ಹರತಾಳು ಹಾಲಪ್ಪ

27/03/2026 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.