ಬೆಂಗಳೂರು : ಈ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಎನ್ನುವುದು ಗೊತ್ತು, ಸಿನಿಮಾದ ಯಶಸ್ಸನ್ನು ಸಹಿಸದವರು ಈ ಕೆಲಸ ಮಾಡಿದ್ದಾರೆ. ನಾವು ಕೇವಲ ಊಟಕ್ಕ ಹೋಗಿದ್ದು ಮಾತ್ರ, ಇದನ್ನು ಇಲ್ಲಿಗೆ ನಿಲ್ಲಿಸಿ. ಇಲ್ಲವಾದಲ್ಲಿ ನಾವು ಕಾನೂನು ಪ್ರಕಾರ ಹೋರಾಟ ಮಾಡ್ತೇವೆ ಅಂತ ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಯಶಸ್ಸು ಕಾಣುವುದು ಮುಖ್ಯ, ಇದರ ಯಾರಿದ್ದಾರೆ ಎನ್ನುವುದು ಮುಖ್ಯ, ಆದರೆ ನಾನು ಹೇಳುವುದಿಲ್ಲ ಅಂತ ಅವರು ಇದೇ ವೇಳೆ ಹೇಳಿದರು. ಇನ್ನೂ ದರ್ಶನ್ ಅವರ ಪ್ರಕಾರ ವಕೀಲರಾದ ನಾರಾಯಣ ಸ್ವಾಮಿ ಅವರು ಮಾತನಾಡಿ, ದರ್ಶನ್ ವಿರುದ್ದ ವ್ಯವಸ್ಥಿತಿ ಪಿತ್ತೂರಿ ನಡೆಯುತ್ತಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಸಮಯ ಮೀರಿ ಹೋಟೆಲ್‌ಗಳು ನಡೆಯುತ್ತಿದ್ದಾವೆ. ಹಾಗಾದ್ರೇ ಅವರ ವಿರುದ್ದ ನೋಟಿಸ್ ಕೊಡಲು ಸಾಧ್ಯನಾ? ಅಂತ ಹೇಳಿದರು. ಇದು ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವೈಯುಕ್ತಿಕವಾಗಿ ಯಾರು ಎಲ್ಲಿ ಬೇಕಾದ್ರು ಊಟ ಮಾಡಬಹುದು ಅಂತ ತಿಳಿಸಿದರು.