ಬೆಂಗಳೂರು: ನಾನು ಸಚಿವ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ ಎಂಬುದಾಗಿ ಸಚಿವ ಬಿ.ನಾಗೇಂದ್ರ ಅವರೇ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಾನು ರಾಜೀನಾಮೆ ನೀಡಿಲ್ಲ ಎಂಬುದಾಗಿ ಯುವತನ ಸೇವೆ, ಕ್ರೀಡೆ ಮತ್ತು ಪರಿಶಿಷ್ಟ ಕಲ್ಯಾಣಗಳ ಸಚಿವ ಬಿ.ನಾಗೇಂದ್ರ ಅವರು ಸ್ಪಷ್ಟ ಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾನು ಸಂಜೆ 4.30ಕ್ಕೆ ಪತ್ರಿಕಾ ಘೋಷ್ಠಿಯನ್ನು ನಡೆಸಲಿದ್ದೇನೆ. ಅಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಮಾಹಿತಿ ಬಿಚ್ಚಿಡಲಿದ್ದೇನೆ ಎಂಬುದಾಗಿ ತಿಳಿಸಿರೋದಾಗಿ ತಿಳಿದು ಬಂದಿದೆ.
ಅಂದಹಾಗೇ ಇಂದು ಸಿಎಂ ಸಿದ್ಧರಾಮಯ್ಯ ಅವರ ಗೃಹ ಕಚೇರಿಗೆ ಕೃಷ್ಣಾಗೆ ತೆರಳಿದ್ದರು. ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿತ್ತು. ಇದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿಸಿದ್ದರು. ಈ ಬೆನ್ನಲ್ಲೇ ಇನ್ನೂ ನಾನು ರಾಜೀನಾಮೆ ನೀಡಿಲ್ಲ ಅಂತ ಬಿ.ನಾಗೇಂದ್ರ ಸ್ಪಷ್ಟ ಪಡಿಸಿದ್ದಾರೆ.
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ : ಕೇವಲ 60 ಸೆಕೆಂಡ್ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್!
ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!