ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ಸರ್ಜರಿ ಆಗುತ್ತಿದೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ್ದೇನೆ. ಆದರೇ ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಒತ್ತಾಯವನ್ನು ಮಾಡಿಲ್ಲ. ಹಾಗಂತ ನಾನೇನು ಸನ್ಯಾಸಿಯೂ ಅಲ್ಲ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದ್ದೇನೆ. ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರವನ್ನು ಒದಗಿಸೋ ಕೆಲಸ ಮಾಡುತ್ತಿದ್ದೇನೆ. ಇನ್ನೂ ಅನೇಕ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕಿದೆ ಎಂದರು.
ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ಸರ್ಜರಿ ಆಗುವ ಮಾತು ಕೇಳಿ ಬರುತ್ತಿದೆ. ನೀವು ಸಚಿವ ಸ್ಥಾನದ ಆಕಾಂಕ್ಷಿಗಳೇ ಅಂತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದಂತ ಅವರು, ನಾನು ಆ ರೀತಿಯ ಆಕಾಂಕ್ಷೆ ಹೊಂದಿಲ್ಲ. ವರಿಷ್ಠರಲ್ಲಿ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ, ಒತ್ತಾಯವನ್ನು ಮಾಡಲ್ಲ. ಹಾಗಂತ ನಾನು ಸನ್ಯಾಸಿನೂ ಅಲ್ಲ ಎಂಬುದಾಗಿ ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ‘KEA ಸ್ಪರ್ಧಾತ್ಮಕ ಪರೀಕ್ಷೆ’ಗಳಿಗೆ ಆಧುನಿಕ ತಂತ್ರಜ್ಞಾನ ಬಳಕೆ: ಸಚಿವ ಡಾ.ಎಂ.ಸಿ ಸುಧಾಕರ್
ಸಿಎಂಗೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ: ಸಂಪುಟ ಸಭೆಯಲ್ಲಿ ನಿರ್ಣಯ: DKS