ಬೆಂಗಳೂರು: ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ ಕಳುಹಿಸಿದ ವಿಚಾರವಾಗಿ ಇಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭೇಟಿಯಾಗಿ ನಟಿ ರಮ್ಯಾ ದೂರು ನೀಡಿದ್ದಾರೆ. ಈ ದೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಲಿದೆ. ಈ ದೂರಿನ ಬಳಿಕ ನಟಿ ರಮ್ಯಾ ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನ ನಾನು ಹಂಚಿಕೊಂಡಿದ್ದೆ. ನನ್ನ ಪೋಸ್ಟ್ ಬಗ್ಗೆ ಕೀಳಾಗಿ ಮೆಸೇಜ್ ಮಾಡಿದ್ದರು. ಇದರಿಂದ ನನಗೆ ಬಹಳ ಬೇಜಾರಾಯಿತು ಎಂದರು.
ನನ್ನ ದೂರನ್ನು ಪಡೆದಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೈಬರ್ ಕ್ರೈ ಪೊಲೀಸರಿಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಭರವಸೆ ನೀಡಿದ್ದಾರೆ. ಹುಡುಗರಂತೆ ಹೆಣ್ಮಕ್ಕಳಿಗೂ ಸ್ವಾತಂತ್ರ್ಯ ಇದೆ. ನಾನು ಎಲ್ಲಾ ಹೆಣ್ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ ಎಂದರು.
ನನಗೆ ಚಿತ್ರರಂಗದಲ್ಲಿ ಬಹಳ ಸಪೋರ್ಟ್ ಸಿಕ್ಕಿದೆ. ಚಿತ್ರರಂಗದವರು ಬಹಳ ಜನ ನನಗೆ ಮೆಸೇಜ್ ಮಾಡಿದ್ದಾರೆ. ಗಂಡು ಮಕ್ಕಳಿಗೆ ಎಷ್ಟು ಸ್ವಾತಂತ್ರಯವಿದೆಯೋ ಅಷ್ಟೇ ಹೆಣ್ಣುಕ್ಕಳಿಗೂ ಇದೆ. ನನಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದವರು ಅನೇಕರು ಹೆಣ್ಣುಮಕ್ಕಳ ಹೆಸರನ್ನು ಹಾಕಿಕೊಂಡು ಕಾಮೆಂಟ್ ಮಾಡಿದ್ದಾರೆ. ಆ ಎಲ್ಲಾ ವಿವರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಸಾಗರದಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ