ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಟಿಕೆಟ್ ಕೈತಪ್ಪಿದಂತ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬಂಡಾದ ಬಿಸಿ ಮುಟ್ಟಿದೆ. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾಗಿ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದರೇ, ಮಾಜಿ ಸಿಎಂ ಡಿವಿ ಸದಾನಂದಗೌಡ ಕೂಡ ಬಂಡಾಯ ಹೇಳೋ ಸಾಧ್ಯತೆ ಇದೆ. ಹೀಗಾಗೇ ಇಂದು ನನ್ನನ್ನು ಕಾಂಗ್ರೆಸ್ ಪಕ್ಷದವರು ಸಂಪರ್ಕಿಸಿದ್ದಾರೆ. ನಾಳೆ ಎಲ್ಲಾ ನಿರ್ಧಾರ ಹೇಳೋದಾಗಿ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಕಾಂಗ್ರೆಸ್ ನವರು ಸಂಪರ್ಕ ಮಾಡಿದ್ದಾರೆ. ಎಲ್ಲಾ ನಿರ್ಧಾರಗಳನ್ನು ನಾಳೆ ಹೇಳುತ್ತೇನೆ ಎಂದರು.
ನಾನು ಸಕಾಲಕ್ಕೆ ತೀರ್ಮಾನ ಮಾಡುತ್ತೇನೆ. ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇನೆ ಅಂತ ನಾಳೆ ತೀರ್ಮಾನ ಪ್ರಕಟಿಸೋದಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಗ್ಗೆ ಡಿ.ವಿ ಸದಾನಂದಗೌಡ ಅವರು ಯಾವುದೇ ಸುಳಿವು ನೀಡಿಲ್ಲ. ಆದ್ರೇ ಅವರನ್ನು ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯೋದಕ್ಕೆ ಡಿಕೆ ಬ್ರದರ್ಸ್ ಎಲ್ಲಾ ಪ್ರಯತ್ನಗಳನ್ನು ತೆರೆ ಮರೆಯಲ್ಲಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಖಚಿತ ಮಾಹಿತಿ ನಾಳೆ ಹೊರ ಬೀಳೋ ಸಾಧ್ಯತೆಯಿದೆ.
ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ‘ಸ್ಮಶಾನ ಜಾಗ’ ತನ್ನದೆಂದು ‘ಸಮಾಧಿ’ಗಳನ್ನೇ ‘ಧ್ವಂಸ’
ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ: ಬಿವೈ ವಿಜಯೇಂದ್ರ