ಮಂಡ್ಯ : ನನಗೆ ಇಬ್ಬಿಬ್ಬರು ಮೂರು ಮೂರು ಜನ ಹೆಂಡ್ತಿರಿಲ್ಲ. ನಾನು ಯಾರ ಜೊತೆನೂ ಸಂಬಂಧ ಇಟ್ಟುಕೊಂಡು ಹೈಟೆಕ್ 5 ಸ್ಟಾರ್ ಹೋಟೆಲ್ ನಲ್ಲಿ ಕುಳಿತುಕೊಂಡಿಲ್ಲ. ನಾನು ಕ್ಷೇತ್ರದಲ್ಲೇ ಇದ್ದಿನಿ ಪ್ರತಿನಿತ್ಯ ಜನ ಸೇವೆ ಮಾಡುತ್ತಾ ಇದ್ದಿನಿ. ನಾನೇಲ್ಲೂ ಓಡಿ ಹೋಗಿಲ್ಲ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಪರೋಕ್ಷವಾಗಿ ಕಿಡಿಕಾರಿದರು.
ಚಿತ್ರದುರ್ಗದ ಶಾಸಕ ವೀರೇಂದ್ರ (ಪಪ್ಪಿ) ಅವರ ಮನೆ, ಕಛೇರಿ ಮೇಲೆ ಕೆಲ ದಿನಗಳ ಹಿಂದೆ ಇಡಿ ದಾಳಿ ಮಾಡಿ ಸಾವಿರಾರು ಕೋಟಿ ಆಸ್ತಿ ಪಾಸ್ತಿ ಪತ್ತೆ ಮಾಡಿ ಪಪ್ಪಿ ಅವರನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ವೀರೇಂದ್ರ ಪಪ್ಪಿ ಅವರ ಮೇಲೆ ಇಡಿ ದಾಳಿ ನಡೆದಾಗಿನಿಂದ ಉದಯ್ ಕ್ಷೇತ್ರದಲ್ಲಿ ಕಾಣೆಯಾಗಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ಸೋಶೀಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಮದ್ದೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಉದಯ್, ನಾನು ಕಾಣೆಯಾಗಿದ್ದಿನಾ ಅಥವಾ ಅವರ ಲೀಡರ್ ಕಾಣಿಯಾಗಿದ್ದಾರಾ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ನಮ್ಮ ಸರ್ಕಾರ ಕೇವಲ 2 ವರ್ಷಗಳಲ್ಲಿ 1200 ಕೋಟಿಗೂ ಹೆಚ್ಚಿನ ಅನುದಾನ ಕೊಟ್ಟಿದೆ. ಕ್ಷೇತ್ರದಲ್ಲಿ ರಸ್ತೆ, ಚರಂಡಿ ಸೇರಿ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ನಿತ್ಯ ಚಾಲನೆ ಕೊಡ್ತಿದ್ದೇನೆ. ಜನತೆ ಮಧ್ಯೆ ಇದ್ದುಕೊಂಡು ನಾನು ನಿರಂತರವಾಗಿ ಅವರ ಸೇವೆ ಮಾಡ್ತಿದ್ದೇನೆ.
ನನಗೆ ಬೇರೆಯವರ ತರ ಇಬ್ಬರು, ಮೂರು ಮೂರು ಜನ ಹೆಂಡ್ತಿರಿಲ್ಲ. ನಾನು ಯಾರ ಜೊತೆಗೂ ಸಂಬಂಧ ಇಟ್ಟುಕೊಂಡು ಹೈಟೆಕ್ 5 ಸ್ಟಾರ್ ಹೋಟೆಲ್ ನಲ್ಲಿ ಕಾಲ ಕಳಿತಿಲ್ಲ. ಇವರು ಏನು ಮಹಾರಾಜ ವಂಶಸ್ಥರಾ? ಇವರಿಗೆ ಯೋಗ್ಯತೆ ಏನಿತ್ತು? ಇವರ ಆಸ್ತಿ ಎಷ್ಟಿತ್ತು? ಇವಾಗ ಇವರ ಆಸ್ತಿಗಳು ಎಷ್ಟಿವೆ? ಮೂಟೆ ಒತ್ತು, ಗುಂಡಿ ತೆಗೆದು ಸಂಪಾದನೆ ಮಾಡಿದ್ದ ಎಂದು ಕೆಂಡಾಮಂಡಲರಾದರು.
ಎರಡೂ ತಿಂಗಳಿಂದ ಅವರ ಲೀಡರ್ ಎಲ್ಲಿ. ಮಂಡ್ಯದಲ್ಲೆ ಕಾಣ್ತಾನೇ ಇಲ್ಲ. ಎರಡು ವರ್ಷದಿಂದ ಕೇಂದ್ರ ಮಂತ್ರಿಯಾಗಿದ್ರು ಮಂಡ್ಯಕ್ಕೆ ಏನು ಕೊಡುಗೆ ನೀಡ್ತಿದ್ದಾರೆ. ನಾನು ನಾಲ್ಕು ವರ್ಷಗಳಿಂದ ನನ್ನ ವ್ಯವಹಾರ, ವಹಿವಾಟುಗಳನ್ನು ನಿಲ್ಲಿಸ್ಬಿಟ್ಟಿದ್ದಿನಿ. ಇವಾಗ ಸಂಪೂರ್ಣವಾಗಿ ಜನ ಸೇವೆ ಮಾಡೋದಕ್ಕೆ ಬಂದಿದ್ದೇವೆ. ಯಾರೋ ಕ್ರಾಸ್ ಬೀಡ್ ಗಳು ಕೆಲಸ ಇಲ್ಲದವರು ಈ ರೀತಿ ಹೇಳ್ತಾರೆ. ಅಂತಹ ತಂದೆಗೆ ಹುಟ್ಟಿದ ಮಕ್ಕಳು ಇಂತಹ ಪೋಸ್ಟ್ ಹಾಕ್ತಾರೆ ಅಂತ ತೀಷ್ಣವಾಗಿ ಹೆಚ್ಡಿಕೆ ಮತ್ತು ಅಭಿಮಾನಿಗಳ ವಿರುದ್ದ ಶಾಸಕ ಉದಯ್ ವಾಗ್ಧಾಳಿ ನಡೆಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಸೆ.7ರಂದು ಚಂದ್ರಗ್ರಹಣ ಹಿನ್ನಲೆ: ಬೆಂಗಳೂರಿನ ಗವಿಗಂಗಾಧರ ದೇವಾಲಯ ಬೆಳಗ್ಗೆ 11 ಗಂಟೆಗೆ ಬಂದ್