ಮಂಡ್ಯ: ಇಂದು ಬಿಜೆಪಿ ಕಾರ್ಯಕರ್ತರು ನಡೆಸಿದಂತ ಹನುಮ ಧ್ವಜ ವಿವಾದದ ಪ್ರತಿಭಟನೆಯಲ್ಲಿ ನನ್ನ ಪ್ಲೆಕ್ಸ್ ಅನ್ನೇ ಬಿಟ್ಟಿಲ್ಲ. ಈ ವಿವಾದ ಸಂಬಂಧ ಸಂಧಾನ ಸಭೆಯನ್ನು ನಾನು ಮಾಡಿ, ಅದರಲ್ಲಿ ಭಾಗಿಯಾಗಿದ್ರೇ ನನ್ನನ್ನೇ ಕೊಲೆ ಮಾಡ್ತಿದ್ರು ಎಂಬುದಾಗಿ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೂ ಕೇಸರಿ ಧ್ವಜದ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಾವು ಶಾಂತಿ ಯಾತ್ರೆ ಮಾಡುತ್ತೇವೆ. ಶೀಘ್ರದಲ್ಲೇ ಶಾಂತಿ ಯಾತ್ರೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು.
ನಾನು ಕೂಡ ಹಿಂದೂ. ಎಲ್ಲಾ ದೇವರನ್ನು ಪೂಜೆ ಮಾಡ್ತೀನಿ. ಮಂಡ್ಯ ಆರ್ ಎಸ್ ಎಸ್ ಕಚೇರಿಗೆ ನಾನು 1 ಲಕ್ಷ ದೇಣಿಗೆ ಕೊಟ್ಟಿದ್ದೇನೆ. ಜನವರಿ.22ರಂದು ಸ್ಥಳೀಯ ರಾಮಮಂದಿರಕ್ಕೆ ಹೋಗಿದ್ದೇನೆ. ಇವರಿಂದ ದೇವರನ್ನು ಪೂಜೆ ಮಾಡುವುದನ್ನು ಕಲಿಯಬೇಕಾಗಿಲ್ಲ ಎಂದರು.
ಇಂದಿನ ಪ್ರತಿಭಟನೆಯ ಸ್ವರೂಪದ ಬಗ್ಗೆ ನಮ್ಮ ಇಂಟೆಲಿಜೆನ್ಸ್ ಫೇಲ್ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ ಎಂಬುದಾಗಿ ತಿಳಿಸಿದರು.
BREAKING: ‘ಬೆಂಗಳೂರು ಶಿಕ್ಷಕರ ಕ್ಷೇತ್ರ’ದ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ‘ಪುಟ್ಟಣ್ಣ’ ನಾಮಪತ್ರ ಸಲ್ಲಿಕೆ
‘ರೈತ’ರಿಗೆ ಗುಡ್ ನ್ಯೂಸ್: ಶೇ.50ರಷ್ಟು ರಿಯಾಯಿತಿ ದರದಲ್ಲಿ ‘ಕೃಷಿ ಉಪಕರಣ’ ಪಡೆಯಲು ಅರ್ಜಿ ಆಹ್ವಾನ