ರಾಮನಗರ: ನೀವು ಎಲ್ಲಿ ಹೇಳುತ್ತಿರೋ ಅಲ್ಲಿ. ನಿಮ್ಮ ಗುಂಡಿಗೆ ಎದೆ ಕೊಡಲು ನಾನು ಸಿದ್ಧವಿದ್ದೇನೆ. ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧವಿದ್ದೇನೆ ಎಂಬುದಾಗಿ ಸಂಸದ ಡಿ.ಕೆ ಸುರೇಶ್, ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಕೆಎಸ್ ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಿದಂತ ಅವರು, ಅದು ಈಶ್ವರಪ್ಪ, ಬಿಜೆಪಿಯವರ ಆಸೆ. ಯಾರು ಏನೂ ಮಾಡಲು ಆಗಲ್ಲ. ನಿಮ್ಮ ಗುಂಡಿಗೆ ಎದೆ ಕೊಡಲು ನಾನು ಸಿದ್ಧವಿದ್ದೇನೆ ಎಂದರು.
ಏಕೆ ಬಡವರನ್ನು ಬಾವಿಗೆ ತಳ್ಳುವ ಕೆಲಸ ಮಾಡುತ್ತಾ ಇದ್ದೀರಿ? ನಿಮಗೆ ಅಧಿಕಾರ ಸಿಗಬೇಕು. ಇನ್ನೇನು ಆಗಬೇಕು ಹೇಳಿ ನಾವು ರೆಡಿ ಇದ್ದೇವೆ. ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲಿ ಅಂತ ಹೇಳಿ. ಅಲ್ಲಿಗೆ ಬರುತ್ತೇವೆ ಎಂದರು.
ನಿಮ್ಮ ಆಸೆ ಏನು ಇದೆ ನನ್ನ ಮೇಲೆ? ಕಾಂಗ್ರೆಸ್ ಮೇಲೆ.? ಡಿಕೆ ಶಿವಕುಮಾರ್ ಮೇಲೆ ಆಸೆ ಏನಿದೆ ತೀರಿಸಿಕೊಳ್ಳಿ. ಕಾಲ ದೂರ ಇಲ್ಲ. ಹತ್ತಿರದಲ್ಲೇ ಇದೆ. ಬರುತ್ತೇನೆ. ನಾವು ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧ ಎಂಬುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದರು.
BIG NEWS: ರಾಜ್ಯದ ಸರ್ಕಾರಿ ಕಚೇರಿಯಲ್ಲಿ ‘ಬಸವಣ್ಣ’ನ ಭಾವಚಿತ್ರ ಹಾಕುವುದು ಕಡ್ಡಾಯ – ಸಿಎಂ ಸಿದ್ಧರಾಮಯ್ಯ ಆದೇಶ