ಶಿವಮೊಗ್ಗ: ಜಿಲ್ಲೆಯಲ್ಲಿ ಬಿಜೆಪಿ ಬಂಡಾಯ ಧಗಧಗಿಸುತ್ತಿದೆ. ನಾಳಿನ ಮೋದಿ ಕಾರ್ಯಕ್ರಮಕ್ಕೆ ಬರೋದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗೇ ಲೋಕಸಭಾ ಚುನಾವಣೆ ಸ್ಪರ್ಧಿಸೋದಾಗಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಇದರ ನಡುವೆ ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆಟ್ ತಪ್ಪೋದಕ್ಕೆ ನಾನು ಕಾರಣವಲ್ಲ ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಬಗ್ಗೆ ಕೆಎಸ್ ಈಶ್ವರಪ್ಪ ತಪ್ಪು ತಿಳಿದುಕೊಂಡಿದ್ದಾರೆ. ನನ್ನ ಬಗ್ಗೆ ಸಿಟ್ಟಿನಲ್ಲಿ ಹಾಗೆ ಮಾತನಾಡುತ್ತಿದ್ದಾರೆ. ನನಗೆ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೆಎಸ್ ಈಶ್ವರಪ್ಪ ಬರುವ ವಿಶ್ವಾಸವಿದೆ ಎಂದು ಹೇಳಿದರು.
ನಾನು ಎಲ್ಲವೂ ಸರಿ ಹೋಗುತ್ತದೆ ಅಂದುಕೊಂಡಿದ್ದೇನೆ. ಕೆಎಸ್ ಈಶ್ವರಪ್ಪ ಅವರ ಮನಸ್ಸಿಗೆ ನೋವಾಗಿರಬಹುದು. ಅವರ ಬಗ್ಗೆ ರಾಜ್ಯ ನಾಯಕರು ಮಾತನಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಅವರನ್ನು ಮತ್ತೆ ಕರೆ ತರುತ್ತೇವೆ. ನಾನು ಅವರ ಪುತ್ರ ಕಾಂತೇಶ್ ಗೆ ಲೋಕಸಭಾ ಟಿಕೆಟ್ ಕೈ ತಪ್ಪಲು ಕಾರಣವಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ನನ್ನ ವಿರುದ್ಧ ತಪ್ಪು ಗ್ರಹಿಕೆ ಬೇಡ ಎಂಬುದಾಗಿ ತಿಳಿಸಿದರು.
‘ವೋಟರ್ ಲೀಸ್ಟ್’ನಲ್ಲಿ ನಿಮ್ಮ ಹೆಸರು ತೆಗೆದು ಹಾಕಲಾಗಿದೆಯೇ? ಜಸ್ಟ್ ಹೀಗೆ ಮಾಡಿ, ಮತ್ತೆ ಸೇರಿಸಿ
‘ಜಾಬ್ ಹಂಟಿಂಗ್’ಗೆ ‘ಲಿಂಕ್ಡ್ಇನ್’ ಕೋಕ್: ‘ಫಾರ್ಟ್ ಫಾರ್ಮನ್’ನಲ್ಲಿ ‘ಗೇಮಿಂಗ್’ ಪರಿಚಯಿಸಲು ನಿರ್ಧಾರ