ಮಂಡ್ಯ: ಸುಮಲತಾ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದು, ಕಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕಣದಲ್ಲಿದ್ದಾರೆ. ಇದೀಗ ಹಿಂದೆ ಸುಮಲತಾ ಬೆನ್ನಿಗೆ ನಿಂತಿದ್ದಂತ ಡಿ ಬಾಸ್, ಈಗ ಅವರ ಪರ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಜೊತೆ ನಿಂತು ಪ್ರಚಾರ ಮಾಡದೇ, ಅವರ ವಿರುದ್ಧದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರಕ್ಕೆ ಇಳಿದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ನಟ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಮತ ಯಾಚನೆ ಮಾಡಿದ್ರು. ಈ ವೇಳೆ ಮಾತನಾಡಿದಂತ ಅವರು, ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ನಾನು ಸ್ಟಾರ್ ಚಂದ್ರು ಪರ ಮತಯಾಚಿಸಲು ಇಲ್ಲಿಗೆ ಬಂದಿದ್ದೀನಿ ಅಷ್ಟೇ ಎಂದರು.
ಸುಮಲತಾ ಟಿಕೆಟ್ ಸಿಕ್ಕಿಲ್ಲ ಎಂದರೇ ಪ್ರಚಾರಕ್ಕೆ ಬನ್ನಿ ಎಂದು ಶಾಸಕ ಉದಯ್ ಕೇಳಿದ್ರು. ಆ ಕಾರಣಕ್ಕಾಗಿ ವ್ಯಕ್ತಿಯ ಪರವಾಗಿ ಈ ಪ್ರಚಾರಕ್ಕೆ ಬಂದಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಸ್ವಾಮಿ ನಮಗೆ ಸಹಾಯ ಮಾಡಿದ್ದರು. ಈಗ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರುಗೆ ಮತ ನೀಡುವಂತೆ ಡಿ.ಬಾಸ್ ಕರೆ ನೀಡಿದರು.
ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಿತಿಮೀರಿದೆ, ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಿದೆ- ಆರ್.ಅಶೋಕ್ ಕಿಡಿಕಿಡಿ
BREAKING: ಇವಿಎಂ-ವಿವಿಪ್ಯಾಟ್ ಪರಿಶೀಲನೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ