ಬೆಂಗಳೂರು: ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಅಂತ ನಟ ದರ್ಶನ್ ಅವರು ಇದೇ ಮೊದಲ ಬಾರಿಗೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದ ಬಳಿಕ ಕಾಣಿಸಿಕೊಂಡಿದ್ದಾರೆ.
ಇದೇ ವೇಳೇ ಅವರು ಈ ಬಾರಿ ನಾನು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ, ನನ್ನ ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತಿದ್ದು, ಸರಿಯಾಗಿ ತುಂಬಾ ಹೊತ್ತು ನಿಂತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಈ ಹಿನ್ನಲೆಯಲ್ಲಿ ನಾನು ಈ ಬಾರಿ ಎಂದಿನ ಹಾಗೇ ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲ, ಸದ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಮುಂದೆ ಒಂದು ದಿನ ನಿಮ್ಮೊಂದಿಗೆ ಕಾಲ ಕಳೆಯುವೆ ಅಂತ ಹೇಳಿದ್ದಾರೆ.
ಇದಲ್ಲದೇ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ವಾಪಸ್ಸು ನೀಡಿರುವುದಕ್ಕೆ ಸಂಬಂಧಪಟ್ಟ ಕ್ಲಾರಿಟಿ ನೀಡಿದ ಅವರು ನಿರ್ಮಾಪಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಹಣವನ್ನು ವಾಪಸ್ಸುಕೊಟ್ಟಿರುವೆ. ಇದಲ್ಲದೇ ಪ್ರೇಮ್ ಅವರೊಂದಿಗೆ ಸಿನಿಮಾ ಮಾಡುವುದಾಗಿ ಅವರು ತಿಳಿಸಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.facebook.com/watch?v=1751073738791599