ವಿಜಯಪುರ: ನಾನು ಬಿಜೆಪಿ ಪಕ್ಷ ವಿರೋಧಿಯಲ್ಲ. ನಾನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧಿ. ಉತ್ತರ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಮೋಸ ಮಾಡಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಜೆಪಿಯನ್ನು ನನ್ನ ತಾಯಿ ಅಂದುಕೊಂಡಿದ್ದೇನೆ. ಹಾಗೆಯೇ ತಿಳಿದುಕೊಂಡಿದ್ದೇನೆ. ನಾನು ಯಾವತ್ತೂ ಬಿಜೆಪಿ ಪಕ್ಷ ವಿರೋಧಿ ನಡೆ ತೋರಿಲ್ಲ. ಬಿಜೆಪಿ ಪಕ್ಷ ವಿರೋಧಿಯೂ ಅಲ್ಲ. ನಾನು ಬಿಎಸ್ ಯಡಿಯೂರಪ್ಪ ವಿರೋಧಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಸಿದ್ರೇ ಬೇರೆಯೇ ನಿರ್ಧಾರ ಮಾಡಲಾಗುತ್ತದೆ. ಹಿಂದೂ ಪಕ್ಷ ಕಟ್ಟುವಂತೆ ಜನರಿಂದ ಕರೆ ಬರುತ್ತಿದೆ. ಯಡಿಯೂರಪ್ಪ ಕುಟುಂಬ ವಿರೋಧ ಪಕ್ಷಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಿಂದೂಗಳ ರಕ್ಷಣೆ ಮಾಡೋದು ಯಾರು ಎಂದು ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
BREAKING: ಯುಗಾದಿ ಹಬ್ಬದ ದಿನವೇ ರಕ್ತದೋಕುಳಿ: ಮಚ್ಚಿನಿಂದ ಪತ್ನಿ, ಆಕೆಯ ತಂಗಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ
BREAKING: 10 & 12 ನೇ ತರಗತಿಯ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಿದ CBSE | New Syllabus For 10th, 12th