ಬೆಂಗಳೂರು: ನಟ ಕಿರಣ್ ರಾಜ್ ಅವರ ಕಾರು ಅಪಘಾತವಾಗಿತ್ತು. ಈ ಅಪಘಾತದಲ್ಲಿ ಕಿರಣ್ ರಾಜ್ ಗಾಯಗೊಂಡಿದ್ದರು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವಂತ ಅವರು ನಾನು ಈಗ ಆರೋಗ್ಯವಾಗಿದ್ದೇನೆ, ಯಾರೂ ಚಿಂತಿಸಬೇಡಿ ಎಂಬುದಾಗಿ ತನ್ನ ಅಭಿಮಾನಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಏನಾಗಿದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಯಾರೆಲ್ಲ ಪ್ಯಾನಿಕ್ ಆಗಿ ಮೆಸೇಜ್ ಮಾಡ್ತಿದ್ದೀರೋ ಚಿಂತಿಸಬೇಡಿ. ಈಗ ನಾನು ಆರೋಗ್ಯವಾಗಿದ್ದೇನೆ. ಸ್ವಲ್ಪ ಪೆಟ್ಟಾಗಿತ್ತು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರೂ ಆತಂಕ ಪಡಬೇಡಿ ಎಂಬುದಾಗಿ ತಿಳಿಸಿದ್ದಾರೆ.
ಅಂದಹಾಗೇ ಸೆ.10ರ ನಿನ್ನೆಯ ರಾತ್ರಿ ಕನ್ನಡತಿ ಸೀರಿಯಲ್ ಪ್ರಸಿದ್ಧ ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದಂತ ಕಾರು ಅಪಘಾತಕ್ಕೀಡಾಗಿತ್ತು. ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಿರಣ್ ರಾಜ್ ಎದೆ ಭಾಗಕ್ಕೆ ಪೆಟ್ಟಾಗಿತ್ತು. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕರ ಗಮನಕ್ಕೆ: ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನ, ಅಕ್ಟೋಬರ್.10 ಲಾಸ್ಟ್ ಡೇಟ್
ಮುಂದಿನ ಮೂರು ಮುಕ್ಕಾಲು ವರ್ಷ ‘ಸಿದ್ಧರಾಮಯ್ಯ’ ಅವರೇ ಮುಖ್ಯಮಂತ್ರಿ: ಸಚಿವ ಈಶ್ವರ್ ಖಂಡ್ರೆ
ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!