ಶಿವಮೊಗ್ಗ: ನನಗೂ ಸಚಿವನಾಗಬೇಕು ಎಂಬ ಆಸೆ ಇದೆ. ನಾನೇನು ರಾಜಕೀಯ ಸನ್ಯಾಸಿಯಲ್ಲ. ಆದರೇ ಹಾಗೆಂದ ಮಾತ್ರಕ್ಕೆ ನನಗೂ ಸಚಿವಸ್ಥಾನ ಕೊಟ್ಟು ಬಿಡ್ತಾರಾ? ಅದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವಾಗಿದೆ. ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಯತೀಂದ್ರ ಸಿದ್ಧರಾಮಯ್ಯನವರು ಸಿದ್ಧರಾಮಯ್ಯ ರಾಜಕೀಯದ ಅಂತಿಮ ಘಟ್ಟದಲ್ಲಿ ಇದ್ದಾರೆ ಎಂಬ ಹೇಳಿಕೆ ಯಾಕೆ ಕೊಟ್ಟಿದ್ದಾರೋ ಅಂತ ನನಗೆ ಗೊತ್ತಿಲ್ಲ. ಆದರೇ ನಮ್ಮಲ್ಲಿ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡೋದು ನಮ್ಮ ರಾಷ್ಟ್ರೀಯ ನಾಯಕರು. ನಮ್ಮ ಹೈಕಮಾಂಡ್ ಆದೇಶದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಹಾಗಂತ ಕೊಟ್ಟು ಬಿಡ್ತಾರಾ? ನಮ್ಮಲ್ಲಿ ಎಲ್ಲದಕ್ಕೂ ಕೇಂದ್ರದ ನಾಯಕರು ಸೂಚನೆ ಕೊಡಬೇಕು. ಅವರ ಸೂಚನೆಯಂತೆ ನಮ್ಮ ನಿರ್ಧಾರ ಇರುತ್ತದೆ. ನಾನು ಸಿಎಂ ಆಗಬೇಕು ಅಂತೀನಿ ಮಾಡಿ ಬಿಡ್ತಾರಾ? ಯಾರು ಯಾರು ಈ ರೀತಿ ಹೇಳಿಕೆ ನೀಡುತ್ತಿದ್ದಾರೋ ಅದೆಲ್ಲವೂ ವೈಯಕ್ತಿಕವಾದಂತ ಹೇಳಿಕೆಯಾಗಿವೆ. ಆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.
ನಾನು ಯಾರ ಪರವಾಗಿಯೂ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಪರವಾಗಿದ್ದೇನೆ. ಯತೀಂದ್ರ ಅವರು ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅದನ್ನು ಅವರಿಗೆ ಕೇಳಬೇಕು. ಸಿದ್ಧರಾಮಯ್ಯ ಅವರು ಒಳ್ಳೆಯ ಆಡಳಿತ ನೀಡಿದ್ದಾರೆ. ಈಗ ಅವರ ಮಗನೇ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಮಗ ಹೇಳಿದ್ದು ನಡೆಯೋದಿಲ್ಲ. ನಮ್ಮ ಪಕ್ಷದ ವರಿಷ್ಠರ ತೀರ್ಮಾನ ನಡೆಯುತ್ತೆ ಎಂದರು.
ಸತೀಶ್ ಜಾರಕಿಹೊಳಿಯವರು ಈ ಹಿಂದಿನ ಚುನಾವಣೆಯಲ್ಲೇ ಹೇಳಿದ್ದರು. 2028ರ ಚುನಾವಣೆ ನನ್ನ ಸಾರಥ್ಯದಲ್ಲಿ ನಡೆಯಬೇಕೆಂದು ಆಗ ಹೇಳಿದ್ದರು. ಆದರೇ ಕೇಂದ್ರದ ನಾಯಕರು ಹೇಳಿದ್ದು ಅಂತಿಮವಾಗುತ್ತದೆ. ಯಾರು ಯಾರೋ ಹೇಳಿದ್ದಕ್ಕೆ ನಮ್ಮಲ್ಲಿ ಬೆಲೆಯಿಲ್ಲ. ಅನೇಕ ಶಾಸಕರು ಅನೇಕ ಹೇಳಿಕೆ ನೀಡಿದ್ದಾರೆ. ಆದರೇ ಆ ಹೇಳಿಕೆಗಳು ಅವರ ವೈಯಕ್ತಿಕವಾದಂತ ಹೇಳಿಕೆಯಾಗಿವೆ. ಪಕ್ಷದ ನಾಯಕರ ನಿರ್ಧಾರಕ್ಕೆ ನಾವು ಜೈ ಎನ್ನುತ್ತೇವೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
‘ಶರಾವತಿ ಪಂಪ್ಡ್ ಸ್ಟೋರೇಜ್’ ನಿರ್ಮಾಣವು ‘ಬಿಜೆಪಿ ಸರ್ಕಾರ’ದ ತೀರ್ಮಾನ: ಶಾಸಕ ಗೋಪಾಲಕೃಷ್ಣ ಬೇಳೂರು








