ನವದೆಹಲಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಐಐಟಿ ಮದ್ರಾಸ್ ನ ಹೈಪರ್ ಲೂಪ್ ಪರೀಕ್ಷಾ ಸೌಲಭ್ಯಕ್ಕೆ ಭೇಟಿ ನೀಡಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಸಹಾಯದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಹೈಪರ್ ಲೂಪ್ ಟ್ಯೂಬ್ ಶೀಘ್ರದಲ್ಲೇ 410 ಮೀಟರ್ ಉದ್ದದ ವಿಶ್ವದ ಅತಿ ಉದ್ದದ ಟ್ಯೂಬ್ ಆಗಲಿದೆ ಎಂದು ಹೇಳಿದರು.
ಐಐಟಿ ಚೆನ್ನೈನಲ್ಲಿರುವ 410 ಮೀಟರ್ ಉದ್ದದ ಹೈಪರ್ ಲೂಪ್ ಟೆಸ್ಟ್ ಟ್ಯೂಬ್ ಈಗಾಗಲೇ ಏಷ್ಯಾದ ಅತಿ ಉದ್ದದ ಹೈಪರ್ ಲೂಪ್ ಪರೀಕ್ಷಾ ಸೌಲಭ್ಯವಾಗಿದೆ. ಹೈಪರ್ ಲೂಪ್ ಒಂದು ಹೈಸ್ಪೀಡ್ ರೈಲು, ಇದು ಟ್ಯೂಬ್ ನಲ್ಲಿ ನಿರ್ವಾತದಲ್ಲಿ ಚಲಿಸುತ್ತದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, “ಏಷ್ಯಾದ ಅತಿ ಉದ್ದದ ಹೈಪರ್ ಲೂಪ್ ಟ್ಯೂಬ್ (410 ಮೀ)… ಶೀಘ್ರದಲ್ಲೇ ಇದು ವಿಶ್ವದ ಅತಿ ಉದ್ದದ ಟ್ಯೂಬ್ ಆಗಲದೆ.”ಎಂದರು
ಮಾರ್ಚ್ 15 ರಂದು ಕೇಂದ್ರ ಸಚಿವರು ಐಐಟಿ ಮದ್ರಾಸ್ ಡಿಸ್ಕವರಿ ಕ್ಯಾಂಪಸ್ನಲ್ಲಿರುವ ಹೈಪರ್ ಲೂಪ್ ಪರೀಕ್ಷಾ ಸೌಲಭ್ಯಕ್ಕೆ ಭೇಟಿ ನೀಡಿ ಲೈವ್ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದರು.
ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಹೈಪರ್ ಲೂಪ್ ಸಾರಿಗೆಗಾಗಿ ಸಂಪೂರ್ಣ ಪರೀಕ್ಷಾ ವ್ಯವಸ್ಥೆಯನ್ನು ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಮತ್ತು ಈ ಸಾಧನೆಗಾಗಿ ಎಲ್ಲಾ ಯುವ ನಾವೀನ್ಯಕಾರರನ್ನು ಅಭಿನಂದಿಸಿದರು.
ಪ್ರಸ್ತುತ ಅಭಿವೃದ್ಧಿಯಲ್ಲಿರುವ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನವು ಇಲ್ಲಿಯವರೆಗೆ ನಡೆಸಿದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿರುವುದರಿಂದ ಭಾರತವು ಶೀಘ್ರದಲ್ಲೇ ಹೈಪರ್ ಲೂಪ್ ಸಾರಿಗೆಗೆ ಸಿದ್ಧವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.