ಬೆಂಗಳೂರು: ಮೂವರು ಹೆಣ್ಣುಮಕ್ಕಳು ಎನ್ನುವ ಕಾರಣಕ್ಕೆ ಒಂದೂವರೆ ತಿಂಗಳ ಹಸುಗೂಸನ್ನೇ ಬಿಟ್ಟು ಪತಿಯೊಬ್ಬ ಹೋಗಿರುವಂತ ಮನಕಲಕುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ಯಲಹಂಕದಲ್ಲಿ ಲವ್ ಕಂ ಅರೆಂಜ್ ಮದುವೆಯಾಗಿದ್ದಂತ ಹರೀಶ್ ಎಂಬಾತನೇ ಈ ರೀತಿಯಾಗಿ ಬಿಟ್ಟು ಹೋಗಿರುವಂತ ಪತಿಯಾಗಿದ್ದಾರೆ. ಹರೀಶ್ ಪ್ರೀತಿಸಿ ವರಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದರು. ವರಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಇತ್ತ ಹರೀಶ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.ಮೂರು ಹೆಣ್ಣುಮಕ್ಕಳನ್ನು ಸಾಕೋದಕ್ಕೆ ಆಗ್ತಿಲ್ಲ ಅಂತ ಪತ್ನಿ ವರಲಕ್ಷ್ಮೀ ಕಣ್ಣೀರು ಹಾಕುತ್ತಿದ್ದಾರೆ. ಪತಿ ತಮ್ಮನ್ನು ಬಿಟ್ಟು ಹೋಗಿರೋ ಬಗ್ಗೆ ಕಳೆದ ತಿಂಗಳು ಈಶಾನ್ಯ ಠಾಣೆಗೆ ದೂರು ನೀಡಿದ್ದಾರೆ. ಆದರೇ ಪತಿ ಹರೀಶ್ ಹುಡುಕಿ ಕರೆಸಿಲ್ಲ ಎಂಬುದಾಗಿ ಆರೋಪಿಸುತ್ತಿದ್ದಾರೆ.
BREAKING: ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಲಿ ರೊಡ್ರಿಗಸ್ ನೇಮಕ








