ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ವೀಡಿಯೋ ವೈರಲ್ ಆಗಿದೆ. ಅದರಲ್ಲಿ ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬ ವಾಗ್ವಾದಕ್ಕೆ ಇಳಿದಂತ ಪತ್ನಿಯನ್ನೇ ಅಪಾರ್ಮೆಂಟಿನ ಕಂಬಿಗಳಿಗೆ ನೇಣು ಹಾಕಿ ಹತ್ಯೆ ಮಾಡಿದ್ದಾನೆ. ಈ ಘಟನೆ ಉತ್ತರಾಖಂಡದಲ್ಲಿ ನಡೆದಿದೆ ಎಂದು ವರದಿಯಾಗಿದ್ದರೂ, ನಿಖರವಾದ ದಿನಾಂಕ ಮತ್ತು ಸ್ಥಳ ತಿಳಿದಿಲ್ಲ.
ಉತ್ತರಾಖಂಡದಲ್ಲಿ ನಡೆದಲ್ಲಿ ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದದ ಸಂದರ್ಭದಲ್ಲಿ ಪತಿಯೊಬ್ಬರು ತನ್ನ ಪತ್ನಿಯನ್ನು ಕಂಬಿಗೆ ನೇತು ಹಾಕುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಈ ವೇಳೆ ಪತ್ನಿ ಸಹಾಯಕ್ಕಾಗಿ ಕಿರುಚುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗಂಡನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರರು, “ಭಾರತದಲ್ಲಿ ಮಹಿಳೆಯರ ಜೀವನ ಅಗ್ಗವಾಗಿದೆ” ಎಂದು ಹೇಳಿದರೆ, ಎರಡನೇ ಬಳಕೆದಾರರು, “ಪೊಲೀಸರು ನಂತರ ಅವರನ್ನು ಬಂಧಿಸುತ್ತಾರೆ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದಾರೆ.
ಆ ಶಾಕಿಂಗ್ ವೀಡಿಯೋ ಈ ಕೆಳಗಿದೆ ನೋಡಿ…
Shocking: Husband hangs wife from railing, Uttarakhand
pic.twitter.com/mEJ0J6KSq0— Ghar Ke Kalesh (@gharkekalesh) June 7, 2025