Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಸಿ ಎಐಸಿಸಿ ಆದೇಶ | Ex CM Siddaramaiah

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

ನಾಳೆ ಡಿ.ಕೆ ಶಿವಕುಮಾರ್ ಅವರು ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಸಿಎಂ ಆಗಿ ಪದಗ್ರಹಣ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೊರೊನಾದಂಥಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ: ಸಿ.ಎಂ.ಸಿದ್ದರಾಮಯ್ಯ ಕರೆ
KARNATAKA

ಕೊರೊನಾದಂಥಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ: ಸಿ.ಎಂ.ಸಿದ್ದರಾಮಯ್ಯ ಕರೆ

By ಅವಿನಾಶ್‌ ಆರ್‌ ಭೀಮಸಂದ್ರ

ಗೌರಿಬಿದನೂರು: ಕೊರೊನಾದಂಥಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದರು.

ಇಡೀ ಮನುಕುಲ ಜೀವಭಯದಲ್ಲಿ ಆತಂಕದಲ್ಲಿ ಇದ್ದ ಕೊರೋನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರನ್ನು ಹೃದಯ ಇದ್ದವರು ಯಾರೂ ಕ್ಷಮಿಸುವುದಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಅರ್ಥಪೂರ್ಣ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಿ ಎಂದು ಕರೆ ನೀಡಿದರು.

ಯಾವ ಕಾರಣಕ್ಕೂ ಇಲ್ಲಿ ಭ್ರಷ್ಟ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ರಕ್ಷಾ ರಾಮಯ್ಯ ಸಜ್ಜನ ಮತ್ತು ಉತ್ಸಾಹಿ ಹಾಗೂ ಕಾಳಜಿ ಇರುವ ಅಭ್ಯರ್ಥಿ. ಇವರನ್ನು ಗೆಲ್ಲಿಸಿ ಕ್ಷೇತ್ರದ ಮತದಾರರ ಮತಗಳಿಗೆ ಒಳ್ಳೆಯ ಘನತೆ ತಂದು ಕೊಡುತ್ತಾರೆ ಎಂದರು.

ಗೌರಿಬಿದನೂರಿನಲ್ಲಿ 50 ಸಾವಿರ ಮತಗಳ ಲೀಡ್ ಸಿಕ್ಕೇ ಸಿಗತ್ತೆ :ಗೌರಿ ಬಿದನೂರು ಕ್ಷೇತ್ರದ ಶಿವಶಂಕರ ರೆಡ್ಡಿ ಮತ್ತು ಪುಟ್ಟಸ್ವಾಮಿ ಗೌಡರು ಒಟ್ಟಾಗಿ ರಕ್ಷಾ ರಾಮಯ್ಯರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ ಎನ್ನುವ ನಂಬಿಕೆ, ಭರವಸೆ ನನಗಿದೆ. ಹೀಗಾಗಿ ಇಬ್ಬರೂ ಸೇರಿ ಗೌರಿಬಿದನೂರು ಕ್ಷೇತ್ರದಲ್ಲಿ 50 ಸಾವಿರ ಲೀಡ್ ಕೊಡಿಸುತ್ತಾರೆ ಎಂದರು.

ಚುನಾವಣೆ ವೇಳೆ ಮಾತ್ರ ಮೋದಿ ಓಡೋಡಿ ಬರ್ತಾರೆ :ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮ ರಾಜ್ಯ ನೆನಪಾಗುವುದೇ ಇಲ್ಲ. ಪ್ರವಾಹ ಬಂದಾಗಲೂ ಈ ಕಡೆ ತಲೆ ಹಾಕಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ. ಚುನಾವಣೆ ವೇಳೆ ಭ್ರಷ್ಟರನ್ನು ಗೆಲ್ಲಿಸಲು ರಾಜ್ಯಕ್ಕೆ ಮೇಲಿಂದ ಬರ್ತಾರೆ ಅಂದರೆ ಅದು ರಾಜ್ಯದ ಜನತೆಗೆ ಮಾಡುವ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದರು.

ಕೊರೋನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಕಾನೂನಿನ ಶಾಸ್ತಿ ಆಗೇ ಆಗುತ್ತದೆ. ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ಕಾದುನೋಡಿ ಎಂದರು.

Humanity will never forgive those who have indulged in corruption even in a situation like Corona. Don't forgive: CM Siddaramaiah ಕೊರೊನಾದಂಥಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ: ಸಿ.ಎಂ.ಸಿದ್ದರಾಮಯ್ಯ ಕರೆ
Share. Facebook Twitter LinkedIn WhatsApp Email

Related Posts

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಸಿ ಎಐಸಿಸಿ ಆದೇಶ | Ex CM Siddaramaiah

1 Min Read

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

1 Min Read

ನಾಳೆ ಡಿ.ಕೆ ಶಿವಕುಮಾರ್ ಅವರು ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಸಿಎಂ ಆಗಿ ಪದಗ್ರಹಣ

2 Mins Read
Recent News

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಸಿ ಎಐಸಿಸಿ ಆದೇಶ | Ex CM Siddaramaiah

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

ನಾಳೆ ಡಿ.ಕೆ ಶಿವಕುಮಾರ್ ಅವರು ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಸಿಎಂ ಆಗಿ ಪದಗ್ರಹಣ

ಕಿಡ್ನಿ ಸ್ಟೋನ್ ಅಪಾಯ ತಡೆಯುತ್ತೆ ‘ಪೊಟ್ಯಾಸಿಯಂ’: ಮೂತ್ರಪಿಂಡದ ಆರೋಗ್ಯಕ್ಕೆ ಇಲ್ಲಿದೆ ತಜ್ಞರ ಮಾಹಿತಿ!

State News
KARNATAKA

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಸಿ ಎಐಸಿಸಿ ಆದೇಶ | Ex CM Siddaramaiah

By ವಸಂತ ಬಿ ಈಶ್ವರಗೆರೆ KARNATAKA 1 Min Read

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ರಚನೆಯ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿರುವ ಬೆನ್ನಲ್ಲೇ, ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರವೊಂದನ್ನು…

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

ನಾಳೆ ಡಿ.ಕೆ ಶಿವಕುಮಾರ್ ಅವರು ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಸಿಎಂ ಆಗಿ ಪದಗ್ರಹಣ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಳೆಯಿಂದ ‘ಯೆಲ್ಲೋ ಲೈನ್’ಗೆ ಹೆಚ್ಚುವರಿ ರೈಲುಗಳ ಸೇರ್ಪಡೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.