ಬೆಂಗಳೂರು: ನಗರದಲ್ಲಿ ಭಾರೀ ಮಳೆಗೆ ಬಹು ದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ಇದೀಗ ಮತ್ತೆ ನಗರದ ಹಲವೆಡೆ ಮಳೆ ಪುನರಾರಂಭಗೊಂಡಿದ್ದು, ಸಂಚಾರ ದಟ್ಟಣೆ ಕೂಡ ಉಂಟಾಗಿದೆ. ಇದರ ನಡುವೆ ಮಳೆಯಿಂದಾಗಿ ಮರವೊಂದು ಮುರಿದು ಬಿದ್ದ ಪರಿಣಾಮ, ಅದರಡಿ ನಿಲ್ಲಿಸಲಾಗಿದ್ದಂತ ಹಲವು ವಾಹನಗಳು ಜಖಂಗೊಂಡಿರುವಂತ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.
ಬೆಂಗಳೂರು ನಗರದಲ್ಲಿ ವರುಣ ಮತ್ತೆ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವ ಪರಿಣಾಮ, ರಸ್ತೆಗಳೆಲ್ಲ ಜಲಾವೃತಗೊಂಡು ರಸ್ತೆ ಯಾವುದೋ, ಗುಂಡಿ ಯಾವುದೋ ಒಂದೂ ವಾಹನ ಸವಾರರಿಗೆ ತಿಳಿಯದಂತೆ ಆಗಿದೆ.
ಮೆಜೆಸ್ಟಿಕ್, ಮಲ್ಲೇಶ್ವರಂ, ಕೆ ಆರ್ ಮಾರ್ಕೆಟ್, ಕಲಾಸಿಪಾಳ್ಯ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಮತ್ತೆ ಮಳೆ ಆರಂಭಗೊಂಡಿದೆ. ಮಲ್ಲೇಶ್ವರಂನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಈ ಪರಿಣಾಮ ಮರವೊಂದು ಮುರಿದು ಬಿದ್ದು, ಅದರಡಿ ನಿಲ್ಲಿಸಲಾಗಿದ್ದಂತ ಆಟೋ, ಬೈಕ್, ಕಾರುಗಳು ಜಖಂಗೊಂಡಿರುವುದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಿಬಿಎಂಪಿಯ ಸಿಬ್ಬಂದಿ ಆಗಮಿಸಿದ್ದು, ವಾಹನಗಳ ಮೇಲೆ ಮುರಿದು ಬಿದ್ದಿರುವಂತ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
BREAKING: ವಿಜಯಪುರದಲ್ಲಿ ಭೂಕಂಪನ: ಜೋರು ಶಬ್ದ ಕೇಳಿ, ಮನೆಯಿಂದಾಚೆ ಓಡಿ ಬಂದ ಜನ | Earthquick In Vijayapura