ಬೆಂಗಳೂರು: ಬಿಬಿಎಂಪಿ ಇ-ಖಾತಾ ಸಹಾಯವಾಣಿ 94806 83695 ಗೆ ಪ್ರತಿದಿನ ಸುಮಾರು 1000 ನಾಗರಿಕರ ಕರೆಗಳಿಗೆ ಇ-ಖಾತಾ ಸಹಾಯವಾಣಿ ಪ್ರತಿಕ್ರಿಯೆ ನೀಡುತ್ತಿದೆ. ಹೆಚ್ಚಿನ ಕರೆಗಳು ಮಾಹಿತಿ ಪಡೆಯುವ ಕರೆಗಳಾಗಿವೆ.
ಯಾವುದೇ ದೂರನ್ನು ಪರಿಹರಿಸಬೇಕಾದರೆ ಅಥವಾ ಮೇಲ್ದರ್ಜೆಗೆ ಕಳಿಸಬೇಕಾದರೆ, ಸಂಬಂಧಿತ ಅಧಿಕಾರಿಗಳಿಗೆ ಆ ದೂರುಗಳನ್ನು ಕಳುಹಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸಹಾಯವಾಣಿ ದೂರಿನ ವಿಚಾರದಲ್ಲಿ ಆಂತರಿಕವಾಗಿ ಅನುಸರಣೆ ಮಾಡಲಾಗುತ್ತದೆ.
ಕಂದಾಯ ವಿಭಾಗದ ವಿಶೇಷ ಆಯುಕ್ತರು ಪ್ರತಿದಿನವೂ ಬಾಕಿ ಇರುವ ನಾಗರಿಕ ದೂರಿನ ಕುರಿತು ಎಲ್ಲಾ ಕಚೇರಿಗಳ ಪರಿಶೀಲನೆ ನಡೆಸುತ್ತಾರೆ.
ಪರಿಹರಿಸಲಾಗಿದೆ ಎಂದು ಘೋಷಿಸಲಾದ ಪ್ರತಿಯೊಂದು ದೂರನ್ನು, ದೂರು ಸಲ್ಲಿಸಿದ ನಾಗರಿಕರೊಂದಿಗೆ ಪರಿಶೀಲಿಸಲಾಗುತ್ತದೆ ಮತ್ತು ನಾಗರಿಕರು ತೃಪ್ತರಾಗದಿದ್ದಲ್ಲಿ ಸಹಾಯವಾಣಿಯಿಂದ ದೂರನ್ನು ಮರು ಸ್ಥಾಪಿಸಲಾಗುತ್ತದೆ.
ದೈನಂದಿನ ಕುಂದುಕೊರತೆ ವರದಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ, ಇದು ಪರಿಹಾರದ ಪ್ರಮಾಣ ಹೆಚ್ಚಿದ್ದು, ಇನ್ನು ಕೇವಲ 124 ದೂರುಗಳು ಮಾತ್ರ ಬಾಕಿಯಿದೆ.
ಆದುದರಿಂದ ಎಲ್ಲ ನಾಗರಿಕರು ಇ-ಖಾತಾ ಸಂಬಂಧಿತ ಯಾವುದೇ ವಿಷಯಗಳಿಗೆ ಬಿಬಿಎಂಪಿ ಕಚೇರಿಗಳಿಗೆ ಹೋಗದೇ ಸಹಾಯವಾಣಿಯನ್ನು ಸಂಪರ್ಕಿಸಲು ವಿನಂತಿಸಿದೆ.