ತುಮಕೂರು: ಜಿಲ್ಲೆಯ ಗ್ರಾಮ ಪಂಚಾಯ್ತಿ ಒಂದರಲ್ಲಿನ ಗ್ರಂಥಾಲಯ ನೇಮಕಾತಿಯಲ್ಲಿ ಭಾರೀ ಅಕ್ರಮವೇ ನಡೆದಿರೋದಾಗಿ ತಿಳಿದು ಬಂದಿದೆ. ಈ ಅಕ್ರಮದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದರೂ, ಅಧಿಕಾರಿಗಳು ಮಾತ್ರ ಕ್ರಮಕ್ಕೆ ಹಿಂದೇಟು ಹಾಕುತ್ತಿರೋದಾಗಿ ಹೇಳಲಾಗುತ್ತಿದೆ.
ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯ್ತಿಯಲ್ಲಿನ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಅಕ್ರಮ ನಡೆಸಲಾಗಿದೆ. ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗುತ್ತದೆ.
ಈ ದೂರನ್ನು ಆಧರಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ದಿನಾಂಕ 05-07-2024ರಂದು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ಪತ್ರವನ್ನು ಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಾರೆ.
ಆದೇಶ ಪತ್ರದಲ್ಲಿ ಏನಿದೆ.?
ಸಂಜೀವಯ್ಯ ಹೆಚ್. ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಕಾರ್ಯಾಲಯ ದೇವಲಾಪುರ ಇವರ ದೂರಿನ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಕುರಿತಂತೆ ಉಪ ನಿರ್ದೇಶಕರು (ಪ ಇವರು ತುಮಕೂರು ಸಲ್ಲಿಸಿರುವ ಜಿಲ್ಲಾ ಗ್ರಂಥಾಲಯ, ಕೇಂದ್ರ ದಿನಾಂಕ 17.11.2023 ವರದಿಯಲ್ಲಿ ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಅವ್ಯವಹಾರ / ಪ್ರಕ್ರಿಯೆ ಲೋಪ ಆಗಿರುವುದ ಕಂಡು ಬಂದಿರುತ್ತದೆ ಎಂದಿದ್ದಾರೆ.
ಆದುದರಿಂದ, ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ನೇಮಕಾತಿಯಲ್ಲಿ ಅವ್ಯವಹಾರ / ಪುಕ್ರಿಯ ಲೋಪ ಆಗ ಕಾರಣಿಭೂತರಾದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕಾರಿ ಮತ್ತು ನೌಕರರ ವಿರುದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಅಪೀಲು) ನಿಯಮಗಳು 194 ರಡಿಆಯುಕ್ತರ ಹಂತದಲ್ಲಿ ಕೂಡಲೇ ಶಿಸ್ತು ಕ್ರಮವಹಿಸುವಂತೆ ತಮ್ಮನ್ನು ಕೋರ ನಿರ್ದೇಶಿಸಲ್ಪಟ್ಟಿದ್ದೇನೆ ಅಂತ ಹೇಳಿದ್ದಾರೆ.
ಆದರೇ ರಾಜ್ಯ ಸರ್ಕಾರದ ಸೂಚನೆ ಬಂದು ಒಂದು ತಿಂಗಳೇ ಕಳೆಯುತ್ತಿದ್ದರೂ, ಯಾವುದೇ ವಿಚಾರಣೆಯಾಗಲೀ, ಕ್ರಮವಾಗಿಲ್ಲ ಎಂಬುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ.
ಇದಲ್ಲದೇ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿರುವಂತ ಅವರು, ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಅನ್ಯಾಯವನ್ನು ಸರಿ ಪಡಿಸಿ ಕೂಡಲೇ, ನ್ಯಾಯ ಸಮ್ಮತ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮದಲ್ಲಿ ಭಾಗಯಾಗಿರುವ ಎಲ್ಲರ ವಿರುದ್ಧ ಸರ್ಕಾರ ಸೂಕ್ತ ಕ್ರಮವನ್ನು ಜರುಗಿಸಿ ನ್ಯಾಯ ಒದಗಿಸ ಬೇಕು ಎಂದು ಆಗ್ರಹಿಸಿದ್ದಾರೆ.
ದೇವಲಾಪುರ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರೇ ಈ ಗಂಭೀರ ಆರೋಪವನ್ನು ಮಾಡಿ, ತನಿಖೆಗೆ ಆಗ್ರಹಿಸಿದ್ದಾರೆ. ಹೀಗಿದ್ದರೂ ಈವರೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ವಹಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಆಗಿರುವಂತ ಅವ್ಯವಹಾರ, ಪ್ರಕ್ರಿಯ ಲೋಪದ ಬಗ್ಗೆ ತನಿಖೆ ನಡೆಸಿ, ಸಂಬಂಧಿಸಿದಂತವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ ಜೊತೆಗೆ ಅವಿನಾಶ್ ಭೀಮಸಂದ್ರ