ಬೆಂಗಳೂರು: ವಿವಿಧ ರೈಲ್ವೆ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ, ನಾಳೆಯಿಂದ ಹುಬ್ಬಳ್ಳಿ-ವಿಜಯವಾಡ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಹುಬ್ಬಳ್ಳಿ ವಿಭಾಗದ ನೈರುತ್ಯ ರೈಲ್ವೆ ಇಲಾಖೆಯಿಂದ ( South Western Railway ) ಮಾಹಿತಿ ನೀಡಲಾಗಿದ್ದು, ಗುಂಟೂರು ವಿಭಾಗದ ವ್ಯಾಪ್ತಿಯಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಕೈಗೊಂಡ ಪರಿಣಾಮವಾಗಿ ಹುಬ್ಬಳ್ಳಿ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಪ್ರತಿ ದಿನ ಸಂಚರಿಸುವ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದಿದೆ.
ರೈಲು ಸಂಖ್ಯೆ 17329, 17330 ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ನಾಳೆಯಿಂದ ತಾತ್ಕಾಲಿಕವಾಗಿ ರದ್ದುಪಡಿಸಲಾಗುತ್ತಿದೆ ಎಂಬುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.
ರೈಲು ಸಂಖ್ಯೆ 17329 ಎಸ್ ಎಸ್ ಎಸ್ ಹುಬ್ಬಳ್ಳಿ – ವಿಜಯವಾಡ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮೇ.16ರಿಂದ 31, 2024ರವರೆಗೆ ರದ್ದುಗೊಳಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ರೈಲು ಸಂಖ್ಯೆ 17330 ವಿಜಯವಾಡ-ಎಸ್ ಎಸ್ ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮೇ.17ರಿಂದ ಜೂನ್.1, 2024ರವರೆಗೆ ರದ್ದುಗೊಳಿಸಲಾಗಿರುತ್ತದೆ ಎಂದಿದೆ.
ಬೆಂಗಳೂರಿಗರೇ ಗಮನಿಸಿ: ಹಾವು ಕಂಡ್ರೆ ಕೊಲ್ಲಬೇಡಿ, ಈ ‘ಸಹಾಯವಾಣಿ’ಗೆ ಕರೆ ಮಾಡಿ
`BMTC’ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್