ಹುಬ್ಬಳ್ಳಿ: ಇತ್ತೀಚೆಗೆ ಆನ್‌ ಲೈನ್‌ ಗೇಮ್‌ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಯುವಕರು ಜೀವವೇ ಕಳೆದುಕೊಳ್ಳವಂತೆ ಆಗಿದೆ.ಇದೀಗ ಅಂತಹ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.ಆನ್‌ ಲೈನ್‌ ಜೂಜಾಟದಿಂದ 11 ಕೋಟಿ ಗೆದ್ದ ಸ್ನೇಹಿತನನ್ನೇ ಕಿಡ್ನ್ಯಾಪ್‌ ಮಾಡಿದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

BIGG NEWS: ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರ; ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ- ಮಾಜಿ ಶಾಸಕ ಸುರೇಶ್‌ ಗೌಡ

 

ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್‌ನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ.
ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.

BIGG NEWS: ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರ; ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ- ಮಾಜಿ ಶಾಸಕ ಸುರೇಶ್‌ ಗೌಡ

 

ಗಿವಾವರ್ ಗೆ ಆನ್ ಲೈನ್ ಜೂಜಾಟವಾಡುವ ಅಭ್ಯಾಸವಿದ್ದು, ಹಲವಾರು ದಿನಗಳಿಂದ ಆನ್ ಲೈನ್ ಕ್ಯಾಸಿನೋ ಜೂಜು ಆಡುತ್ತಿದ್ದ. ಕಳೆದ ತಿಂಗಳು ಗಿಲಾವರ್ ಅದೃಷ್ಟ ಕುಲಾಯಿಸಿ ಬರೊಬ್ಬರಿ 11 ಕೋಟಿ ಗೆದ್ದಿದ್ದ. ಹೀಗಾಗಿ ಇತನನ್ನು ಕಿಡ್ನ್ಯಾಪ್‌ ಮಾಡಲು ಮುಂದಾಗಿದ್ದಾರೆ. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

 

Share.
Exit mobile version