ನವದೆಹಲಿ: ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಹತ್ಯೆಗೈದಿದ್ದಂತ ಆರೋಪಿಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಈ ಘಟನೆಯ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ.
ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಂಧಿತ ಆರೋಪಿಗಳ ಸಾವು ಮತ್ತು ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮಾಧ್ಯಮ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ವರದಿಯ ಪ್ರಕಾರ, ಇದು ಏಪ್ರಿಲ್ 14 ರಂದು ನಡೆದ ಘಟನೆ ಇದಾಗಿದೆ.
ಅಂದಹಾಗೇ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಂತ ಬಿಹಾರ ಮೂಲದ ವ್ಯಕ್ತಿಯೊಬ್ಬ, ಆಕೆಯನ್ನು ಹತ್ಯೆಗೈದಿದ್ದನು. ಪೊಲೀಸರು ಬಂಧನಕ್ಕೆ ತೆರಳಿದಂತ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗೋದಕ್ಕೆ ಯತ್ನಿಸಿದಂತ ಸಂದರ್ಭದಲ್ಲಿ ಗುಂಡೇಟು ನೀಡಿದ್ದರು. ಈ ಗುಂಡು ಆರೋಪಿಯ ಎದೆಯನ್ನೇ ಸೀಳಿ, ಎನ್ ಕೌಂಟರ್ ಗೆ ಕಾರಣವಾಗಿತ್ತು.
The National Human Rights Commission (NHRC), India has taken suo motu cognizance of a media report about the abduction, rape and murder of a minor girl and the death of the arrested accused in a police encounter in Hubballi, Karnataka. Reportedly, the incident happened on 14th… pic.twitter.com/p8Bz1UqYZG
— ANI (@ANI) April 30, 2025
ಜೈವಿಕ ಇಂಧನವನ್ನು ಮಾಲಿನ್ಯಕಾರಕವಲ್ಲದ ಇಂಧನದ ಗುಂಪಿಗೆ ಸೇರಿಸಲು ಕ್ರಮ: ಅಧ್ಯಕ್ಷ ಎಸ್.ಈ.ಸುಧೀಂದ್ರ
BIG NEWS : ದೇಶದಲ್ಲಿ ನಾಳೆಯಿಂದ 15 ಬ್ಯಾಂಕುಗಳ ವಿಲೀನ : ಖಾತೆದಾರರ ಮೇಲೆ ಏನು ಪರಿಣಾಮ ಬೀರುತ್ತದೆ?