ಹುಬ್ಬಳ್ಳಿ: ನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಅಡುಗೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡು 9 ಮಂದಿ ಗಾಯಗೊಂಡಿದ್ದರು. ಇವರಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಬದುಕುಳಿದಿದ್ದಂತ ಓರ್ವ ಬಾಲಕ ಇಂದು ಗುಣಮುಖರಾಗಿ, ಆಸ್ಪತ್ರೆಯಿಂದ ಬರೋಬ್ಬರಿ 2 ತಿಂಗಳ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.
ಹುಬ್ಬಳ್ಳಿಯ ಅಚ್ಚವ್ವನ ಕಾಲೋಜನಿಯಲ್ಲಿ ಡಿಸೆಂಬರ್.22, 2024ರಂದು ಅಯ್ಯಪ್ಪ ಮಾಲಾಧಾರಿಗಳು ಅಡುಗೆ ಮಾಡುತ್ತಿದ್ದಾಗಲೇ ಸಿಲಿಂಡರ್ ಸ್ಪೋಟಗೊಂಡು 9 ಮಾಲಾಧಾರಿಗಳು ಗಾಯಗೊಂಡಿದ್ದರು.
ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ 8 ಮಂದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅವರಿಗೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ಘೋಷಣೆ ಮಾಡಲಾಗಿದೆ.
ಇನ್ನೂ ಈ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಬಾಲಕ ವಿನಾಯಕ್ (12) ಗುಣಮುಖರಾಗಿ ಕಿಮ್ಸ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಬರೋಬ್ಬರಿ 2 ತಿಂಗಳು ಚಿಕಿತ್ಸೆ ನಂತ್ರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅಂದಹಾಗೇ ಹುಬ್ಬಳ್ಳಿಯ ಸಿಲಿಂಡರ್ ಸ್ಪೋಟ ದುರಂತದಲ್ಲಿ ವಿನಾಯಕ್ ಅವರ ತಂದೆ ಪ್ರಕಾಶ್ ಕೂಡ ಗಾಯಗೊಂಡಿದ್ದರು. ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
BREAKING: ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಪತಿಯ ಒಪ್ಪಿಗೆ ಇದ್ದರೆ ಅರ್ಹ ವಯಸ್ಸಿನ ವಿವಾಹಿತ ಮಹಿಳೆ ಐವಿಎಫ್ ಚಿಕಿತ್ಸೆ ಪಡೆಯಬಹುದು: ಹೈಕೋರ್ಟ್