ಕೆಎನ್‌ಎನ್‌ಡಿಜಿಟಲ್‌ಡೆಸ್ಕ್:
ಅಡುಗೆಗೆ ಬಳಸುವ ಹಿಟ್ಟುಗಳಲ್ಲಿ ಕಲಬೆರಕೆ ವಿಷಯ ಆಗಾಗ ಚರ್ಚೆಯಾಗುತ್ತಾ ಇರುತ್ತದೆ. ಹೀಗೆ ಈ ಹಿಟ್ಟುಗಳಲ್ಲಿ ಏನು ಕಲಬೆರಕೆ ಮಾಡುತ್ತಾರೆ. ಅದರಿಂದಾಗುವ ದುಷ್ಪರಿಣಾಮ ಹಾಗು ಅದನ್ನು ಕಂಡು ಹಿಡಿಯೋದು ಹೇಗೆ ಎಂಬುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಹಿಟ್ಟಿನಲ್ಲಿ ಮಿಶ್ರಣ ಮಾಡಿದ ಪದಾರ್ಥಗಳನ್ನು ಬೇರ್ಪಡಿಸಲು ಕಷ್ಟ ಹಾಗಾಗಿ ಕಲಬೆರಕೆ ಇಲ್ಲದೆ ಇರುವ ಹಿಟ್ಟನ್ನು ಕೊಂಡು ತಂದರೆ ಯಾವುದೇ ತಾಪತ್ರಯ ಇರುವುದಿಲ್ಲ. ಅಂದಹಾಗೆ ಅಕ್ಕಿ ಮತ್ತು ಮೈದಾ ಹಿಟ್ಟುಗಳಲ್ಲಿ ಕಲಬೆರಕೆ ಮಾಡುವ ವಸ್ತು ಎಂದರೆ ಅದು ಬೋರಿಕ್ ಆಮ್ಲ.
ಬೋರಿಕ್ ಆಮ್ಲ ಎಂದರೇನು? ನೀರಿನಲ್ಲಿ ಸುಲಭವಾಗಿ ಕರಗುವಂತಹ ನೈಸರ್ಗಿಕವಾಗ ಬಿಳಿ ಬಣ್ಣದ ಸಂಯುಕ್ತ. ಇದರಲ್ಲಿ ಆಮ್ಲಜನಕ, ಬೋರಾನ್ ಹಾಗು ಹೈಡ್ರೋಜನ್ ಇರುತ್ತದೆ. ಇದು ಶಿಲೀಂದ್ರ ನಾಶಕ ಮತ್ತು ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಹೋಮಿಯೋಪತಿ ಚಿಕಿತ್ಸೆ ಮಾಡುವಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇಂತದ ಪದಾರ್ಥವನ್ನು ಅಹಾರದಲ್ಲಿ ಬೆರಸುವ ಮೂಲಕ ಕಲಬೆರಕೆ ಆಹಾರವನ್ನಾಗಿ ಮಾಡಿ ಅದರ ಗುಣಮಟ್ಟವನ್ನೂ ಹಾಳು ಮಾಡುತ್ತಾರೆ.
ಬೋರಿಕ್ ಆಮ್ಲದ ಅಡ್ಡ ಪರಿಣಾಮಗಳೇನೆಂದರೆ, ಇದು ಚರ್ಮದ ಆರೋಗ್ಯವನ್ನು ಹದಗೆಡಿಸುತ್ತದೆ. ಜೊತೆಗೆ ಚರ್ಮದ ಅಲರ್ಜಿಯನ್ನೂ ಉಂಟು ಮಾಡುತ್ತದೆ. ಹಿಟ್ಟಿನಲ್ಲಿ ಇದನ್ನು ಬೆರಸಿದರೆ ಆರೋಗ್ಯದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರುತ್ತದೆ. ಬೋರಿಕ್ ಆಮ್ಲ ಮಿಶ್ರಿತ ಆಹಾರ ಸೇವಿಸಿದರೆ ಹೊಟ್ಟೆನೋವು, ಅಲರ್ಜಿ, ನರಮಂಡ ತೊಂದರೆ, ವಾಕರಿಕೆ, ವಾಂತಿಯಂತಹ ಅನೇಕ ಸಮಸ್ಯೆಗಳು ನೇರವಾಗಿ ಕಾಡಲಾರಂಭಿಸಿತ್ತವೆ.
ಬೋರಿಕ್ ಆಮ್ಲದ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡ ನಂತರ ಹಿಟ್ಟಿನಲ್ಲಿ ಇದರ ಮಿಶ್ರಣವಿದೆ ಎಂದು ಹೇಗೆ ಕಂಡುಹಿಡಿಯುವುದೆಂದರೆ,
ಒಂದು ಟೆಸ್ಟ್‌ಟ್ಯೂಬ್‌ನಲ್ಲಿ 1ಗ್ರಾಂ ಮೈದಾ ಹಾಕಿ
ನಂತರ ಅದಕ್ಕೆ 5ಮಿಲಿ ನೀರು ಸೇರಿಸಿ.
ಬಿಳಿ ಸಾಂದ್ರೀಕೃತ ಹೈಡ್ರೋಕ್ಲೋರಿಕ್ ಆಸಿಡ್‌ನ ಎರಡು ಹಿನಿಗಳು ಸೇರಿಸಿ.
ಆ ದ್ರಾವಣಕ್ಕೆ ಅರಿಶಿನ ಕಾಗದದ ಪಟ್ಟಿಯನ್ನು ಅದ್ದಿ.
ಹಿಟ್ಟಿನಲ್ಲಿ ಯಾವುದೆ ಕಲಬೆರಕೆ ಇಲ್ಲದೇ ಇದ್ದರೆ ಅರಿಶಿನ ಬಣ್ಣದ ಪೇಪರ್ ಮೇಲೆ ಯಾವುದೇ ಬಣ್ಣ ಬದಲಾವಣೆ ಕಂಡುಬರುವುದಿಲ್ಲ.
ಅದೇ ಹಿಟ್ಟಿನಲ್ಲಿ ಕಲಬೆರಕೆ ಇದ್ದರೆ ಅರಿಶಿನ ಬಣ್ಣದ ಪೇಪರ್ ಕೆಂಪು ಬಣ್ಣಕ್ಕೆ ಬದಲಾಗುತ್ತದೆ
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.