ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ 2024ರ ಕುಸ್ತಿಯ ಅಂತಿಮ ಪಂದ್ಯದಲ್ಲಿ ವಿನೇಶ್ ಫೋಗಟ್ ಅನರ್ಹಗೊಂಡ ನಂತರ ಇಡೀ ದೇಶದಲ್ಲಿ ನಿರಾಶೆಯಾಗಿದೆ. ಏತನ್ಮಧ್ಯೆ, ವಿನೇಶ್ ಫೋಗಟ್’ಗಾಗಿ ಸರ್ಕಾರ ಎಷ್ಟು ಹಣವನ್ನ ಖರ್ಚು ಮಾಡಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ವಿನೇಶ್’ಗೆ ಸರ್ಕಾರ ತುಂಬಾ ಹಣ ಖರ್ಚು ಮಾಡಿದೆ.!
ವಿನೇಶ್’ಗಾಗಿ ಸರ್ಕಾರ 70 ಲಕ್ಷ 45 ಸಾವಿರ ರೂಪಾಯಿ ಖರ್ಚು ಮಾಡಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ತಿಳಿಸಿದ್ದಾರೆ. ವಿನೇಶ್ ಅವರನ್ನ ವಿದೇಶಕ್ಕೂ ತರಬೇತಿಗೆ ಕಳುಹಿಸಲಾಗಿತ್ತು ಎಂದು ತಿಳಿಸಿದರು. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೂ ಅಗತ್ಯ ಸೂಚನೆಗಳನ್ನ ನೀಡಲಾಗಿದೆ.
ವಿನೇಶ್ ಫೋಗಟ್ ಅವರ ತೂಕವನ್ನ ಬೆಳಿಗ್ಗೆ 7.10 ಮತ್ತು 7.30ಕ್ಕೆ ಅಳೆಯಲಾಯಿತು ಎಂದು ಕ್ರೀಡಾ ಸಚಿವರು ಹೇಳಿದರು. ವಿನೇಶ್ ಅವರ ತೂಕ 50 ಕೆಜಿಗಿಂತ 100 ಗ್ರಾಂ ಹೆಚ್ಚು ಎಂದು ಕಂಡುಬಂದಿದೆ. ವಿನೇಶ್’ಗೆ ವಿಶ್ವ ದರ್ಜೆಯ ಸಹಾಯಕ ಸಿಬ್ಬಂದಿ ಇದ್ದರು. ಅವರಿಗೆ ವಿದೇಶಿ ಕೋಚ್ ಕೂಡ ನೀಡಲಾಗಿತ್ತು. ವಿನೇಶ್ ಅನರ್ಹತೆಗೆ ಭಾರತ ಒಲಿಂಪಿಕ್ ಸಂಸ್ಥೆಗೆ ತನ್ನ ಪ್ರತಿಭಟನೆಯನ್ನ ವ್ಯಕ್ತಪಡಿಸಿದೆ.
ಇಡೀ ವಿಷಯ ಏನು.?
ವಿನೇಶ್ ಫೋಗಟ್ 50 ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್’ಗೆ ಪ್ರವೇಶಿಸಿದ್ದರು. ಆದ್ರೆ, ಅಧಿಕ ತೂಕದ ಕಾರಣ, ಅವರು ಅಂತಿಮ ಪಂದ್ಯದಿಂದ ಅನರ್ಹಗೊಂಡಿದ್ದಾರೆ. ಇದು ದೇಶದ ಕ್ರೀಡಾ ಪ್ರೇಮಿಗಳಿಗೆ ತೀವ್ರ ಪೆಟ್ಟು ನೀಡಿದೆ. ವಿನೇಶ್ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ಇಡೀ ದೇಶವೇ ನಿರೀಕ್ಷಿಸಿತ್ತು. ವಿನೇಶ್ ತನ್ನ ಅಂತಿಮ ಪಂದ್ಯವನ್ನ ತಡರಾತ್ರಿ 12:45ಕ್ಕೆ ಆಡಿದ್ದರು. ಆದ್ರೆ, ಈಗ ಆಕೆಯನ್ನ ಅನರ್ಹಗೊಳಿಸಲಾಯಿತು. ಅವರಿಗೆ ಬೆಳ್ಳಿ ಪದಕ ಕೂಡ ಸಿಗುವುದಿಲ್ಲ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ವಿನೇಶ್ ಅವರಿಗೆ ಸಾಂತ್ವನ ಹೇಳಿದ್ದಾರೆ. ಅವರು, “ವಿನೇಶ್, ನೀವು ಚಾಂಪಿಯನ್’ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ. ಸವಾಲುಗಳನ್ನ ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮಗಾಗಿ ಪ್ರಾರ್ಥಿಸುತ್ತಿದ್ದೇವೆ” ಎಂದರು.
BREAKING : ನೇಪಾಳದಲ್ಲಿ ‘ಹೆಲಿಕಾಪ್ಟರ್’ ಪತನ : ‘ಪೈಲಟ್ ಸೇರಿ 5 ಮಂದಿ’ ಸಾವು |Helicopter crash
‘ಒಲಿಂಪಿಕ್ಸ್’ನಿಂದ ‘ವಿನೇಶ್ ಫೋಗಟ್’ ಅನರ್ಹ ; ‘IOA’ ತೀವ್ರ ಆಕ್ಷೇಪ : ಕ್ರೀಡಾ ಸಚಿವ ‘ಮಾಂಡವಿಯಾ’