ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿಮಗಿದು ಗೊತ್ತೇ…? ಜಗತ್ತಿನಾದ್ಯಂತ ಸುಮಾರು 15ರಿಂದ 18 ಬಗೆಯ ಬಾಳೆಹಣ್ಣುಗಳಿವೆಯಂತೆ. ಇದರಲ್ಲಿ ಕೆಂಪು ಬಾಳೆಹಣ್ಣು ಕೂಡ ಒಂದು. ಇದು ನಮ್ಮ ಭಾರತದಲ್ಲಿ ಕೆಲ ಭಾಗಳಲ್ಲಿ ಮಾತ್ರ ಸಿಗುತ್ತದೆ. ತೀರಾ ವಿರಳವಾಗಿ ಸಿಗುವ ಈ ಕೆಂಪು ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕೆಂಪು ಬಾಳೆಹಣ್ಣು ಸೇವಿಸಿದರೆ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗುತ್ತದೆ. ಸಂಶೋಧನೆಯೊಂದ ಪ್ರಕಾರ ಸುದೀರ್ಘ ಕಾಲದ ವರೆಗೆ ರೋಗನಿರೋಧಕ ಶಕ್ತಿ ಒದಗಿಸುವಲ್ಲಿ ಕೆಂಪು ಬಾಳೆಹಣ್ಣು ತುಂಬಾ ಪ್ರಯೋಜನಕಾರಿ.
ಕೆಂಪು ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ತ್ವಚೆಯ ಉತ್ತಮ ಆರೈಕೆಯಾಗುತ್ತದೆ. ಅಲ್ಲದೇ ಈ ಹಣ್ಣನು ಕಿವುಚಿ ಜೇನು ತುಪ್ಪದೊಂದಿಗೆ ಬೆರಸಿ ಮುಖಕ್ಕೆ ಪ್ಯಾಕ್ ಹಾಕಿಕೊಂಡು, ಸ್ವಲ್ಪ ಸಮಯದ ನಂತ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಕೂದಲಿನ ಆರೈಕೆಗೂ ಕೆಂಪು ಬಾಳೆಹಣ್ಣು ಮನೆಮದ್ದಾಗಿದೆ. ಇದನ್ನು ಕಿವುಚಿ ತೆಂಗಿನ ಎಣ್ಣೆಯೊಂದಿಗೆ ಬೆರಸಿ ಕೂದಲಿಗೆ ಹಚ್ಚಿದರೆ ಕೂದಲು ರೇಷ್ಮೆಯಂತೆ ಹೊಳೆಯುತ್ತವೆ.
ಹೀಗೆ ದೇಹದ ಆರೋಗ್ಯ ಹಾಗು ಚರ್ಮದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾದ ಕೆಂಪು ಬಾಳೆಹಣ್ಣಿನಲ್ಲಿ ಅನೇಕ ವಿಟಮಿನ್, ಖನಿಜಾಂಶ ಹಾಗು ಫೈಬರ್ ಅಂಶಗಳಿದ್ದು ಇದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗಿ. ಮಲಬದ್ಧತೆಯನ್ನು ತೆಡಗಟ್ಟುತ್ತದೆ.
ಕೆಂಪು ಬಾಳೆಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ಹಸಿವನ್ನು ತಡೆಯುವುದಲ್ಲದೇ ಊಟ ಕಡಿಮೆ ಮಾಡುವಂತೆ ಮಾಡುತ್ತದೆ. ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ. ಒಟ್ಟಾರೆ ದೇಹದ ತೂಕ ಇಳಿಸಿಕೊಳ್ಳಲು ಡಯಟ್ ಮಾಡುವವರು ಈ ಹಣ್ಣನ್ನು ಸೇವಿಸಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.