ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣ ಸಂಬಂಧ ವಿದೇಶದಿಂದ ಪ್ರಜ್ವಲ್ ಬಂದು ತನಿಖೆಗೆ ಸಹಕಾರ ನೀಡಬೇಕು. ಪ್ರಜ್ವಲ್ ರೇವಣ್ಣ ವಿದೇಶದಿಂದ ಬಂದು ಪೊಲೀಸರಿಗೆ ಶರಣಾಗಬೇಕು. ಎಷ್ಟು ದಿನ ಕಳ್ಳ ಪೊಲೀಸ್ ಆಟ ಆಡ್ತೀಯಾ? ಬಂದು ಶರಣಾಗು ಎಂಬುದಾಗಿ ಪ್ರಜ್ವಲ್ ರೇವಣ್ಣಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಅಶ್ಲೀಲ ವೀಡಿಯೋ ಸಂಬಂಧ ಪ್ರಜ್ವಲ್ ರೇವಣ್ಣ ವಿದೇಶದಿಂದ ತನಿಖೆಗೆ ಸಹಕಾರ ನೀಡಬೇಕು. ನಾನು ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ. ಈ ನೆಲದ ಕಾನೂನು ಇದೆ. ಯಾಕೆ ವಿದೇಶದಲ್ಲಿ ಇರಬೇಕು? ಎಷ್ಟು ದಿನ ಕಳ್ಳ ಪೋಲೀಸ್ ಆಟ ಆಡ್ತೀಯಾ ಎಂದರು.
ಕೈ ಮುಗಿದು ಮನವಿ ಮಾಡುತ್ತೇನೆ. ನನ್ನ ಹಾಗೂ ಹೆಚ್.ಡಿ ದೇವೇಗೌಡರ ಮೇಲೆ ಗೌರವ ಇದ್ದರೇ 24-48 ಗಂಟೆ ಒಳಗೆ ಬೆಂಗಳೂರಿಗೆ ಬಂದು, ಪೊಲೀಸರಿಗೆ ಶರಣಾಗುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು.
ಅಂದಹಾಗೇ ಅಶ್ಲೀಲ ವೀಡಿಯೋ ಬೆಳಕಿಗೆ ಬರುತ್ತಿದ್ದಂತ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಅವರ ವಿರುದ್ಧ ಎಸ್ಐಟಿ ಅಧಿಕಾರಿಗಳು ವಾರೆಂಟ್ ಕೂಡ ಪಡೆದಿದ್ದಾರೆ. ಅವರ ಬಂಧನಕ್ಕಾಗಿ ಕಾಯುತ್ತಿದ್ದಾರೆ. ಆದ್ರೇ ಈಗಾಗಲೇ ಹಲವು ಬಾರಿ ಬೆಂಗಳೂರಿಗೆ ವಿದೇಶದಿಂದ ಟಿಕೆಟ್ ಬುಕ್ ಮಾಡಿದ್ದಂತ ಪ್ರಜ್ವಲ್, ವಿಮಾನ ಹೊರಟರೋ ಅದಕ್ಕೆ ಹತ್ತದೇ ವಿದೇಶಯದಲ್ಲೇ ಇದ್ದಾರೆ.
BREAKING : ʻಹೊಸ ಕ್ರಿಮಿನಲ್ ಕಾನೂನುʼಗಳ ವಿರುದ್ಧದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
BREAKING : ದೊಡ್ಡ ಭಯೋತ್ಪಾದಕ ದಾಳಿ ಸಂಚು ವಿಫಲ : ಗುಜರಾತ್’ನಲ್ಲಿ ನಾಲ್ವರು ‘ISIS ಉಗ್ರರ’ ಬಂಧನ