ವಾಷಿಂಗ್ಟನ್:ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಪ್ರಬಲ ಎ-10 ವಾರ್ಟ್ಹಾಗ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು, ಈ ಕಾರ್ಯಾಚರಣೆಯ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಅಮೆರಿಕದ ಮಿಲಿಟರಿ ತಂತ್ರಜ್ಞಾನಕ್ಕೆ ಬಹಿರಂಗ ಸವಾಲು ಹಾಕಿದೆ.
ಇರಾನ್ನ ಐಆರ್ಜಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಅಮೆರಿಕದ ಎ-10 ವಿಮಾನವು ಇರಾನ್ ಗಡಿಯೊಳಗೆ ಹಾರಾಟ ನಡೆಸುತ್ತಿರುವಾಗ ಇರಾನ್ನ ಕ್ಷಿಪಣಿಗಳು ಅದನ್ನು ನಿಖರವಾಗಿ ಗುರಿಯಾಗಿಸಿ ಹೊಡೆದುರುಳಿಸುವ ದೃಶ್ಯಗಳಿವೆ.ಎ-10 ವಾರ್ಟ್ಹಾಗ್ ಅಮೆರಿಕದ ಅತ್ಯಂತ ಶಕ್ತಿಶಾಲಿ ವಿಮಾನಗಳಲ್ಲಿ ಒಂದು. ಇದು ವಿಶೇಷವಾಗಿ ಭೂಮಿಯ ಮೇಲಿನ ಟ್ಯಾಂಕ್ಗಳನ್ನು ನಾಶಪಡಿಸಲು ಮತ್ತು ಕಡಿಮೆ ಎತ್ತರದಲ್ಲಿ ಹಾರಾಡಿ ದಾಳಿ ನಡೆಸಲು ಹೆಸರುವಾಸಿ. ಇಂತಹ ವಿಮಾನವನ್ನು ಹೊಡೆದುರುಳಿಸಿರುವುದು ಅಮೆರಿಕಕ್ಕೆ ದೊಡ್ಡ ಹೊಡೆತವಾಗಿದೆ.
ಇರಾನ್ ತನ್ನ ಸ್ವದೇಶಿ ನಿರ್ಮಿತ ‘ಖೋರ್ಡಾದ್-15’ (Khordad-15) ಅಥವಾ ‘ಬಾವರ್-373’ ರಕ್ಷಣಾ ವ್ಯವಸ್ಥೆಯನ್ನು ಬಳಸಿ ಈ ದಾಳಿ ನಡೆಸಿರಬಹುದು ಎಂದು ರಕ್ಷಣಾ ತಜ್ಞರು ಅಂದಾಜಿಸಿದ್ದಾರೆ.
ಅಮೆರಿಕದ ಪ್ರತಿಕ್ರಿಯೆ: ತನ್ನ ವಿಮಾನ ಪತನಗೊಂಡಿರುವುದನ್ನು ಅಮೆರಿಕ ಖಚಿತಪಡಿಸಿದ್ದು, ಇದು “ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ನಡೆದ ಅಪ್ರಚೋದಿತ ದಾಳಿ” ಎಂದು ಕಿಡಿ ಕಾರಿದೆ.
🔴BREAKING | IRGC Aerospace Force has released footage showing Iranian air defense downing the American A-10 ‘Warthog’ pic.twitter.com/CqlrWdb1Fh
— Iran Military Media ☫ (@IRMilitaryMedia) April 3, 2026








