ಬೆಂಗಳೂರು: ಹೋಟೆಲ್ ಮಾಲೀಕರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೋಮಾಗೆ ಜಾರುವಂತೆ ಹೊಡೆದಿರುವಂತ ಘಟನೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಜಯೇಂದ್ರ ಶೆಟ್ಟಿ ಎಂಬುವರು ಮಂಜುನಾಥ್ ಟಿಫನ್ ಸೆಂಟರ್ ಎಂಬಂತ ಹೋಟೆಲ್ ಒಂದನ್ನು ನಡೆಸುತ್ತಿದ್ದರು.
ರಾತ್ರಿ ಮಲಗುವಾಗ ಕಿಟಕಿಯಲ್ಲಿ ಕೀ ಇಟ್ಟು, ಹೋಟೆಲ್ ಒಳಗೆ ಮಲಗುತ್ತಿದ್ದಂತ ಅವರು, ನಿನ್ನೆ ರಾತ್ರಿ ಕೂಡ ಎಂದಿನಂತೇ ಕಿಟಕಿಯಲ್ಲಿ ಕೀ ಇಟ್ಟು ಮಲಗಿದ್ದಾರೆ. ಈ ವಿಷಯ ತಿಳಿದಿದ್ದಂತ ಪರಿಚಯಸ್ಥರೇ, ಕೀ ತೆಗೆದು ಒಳಗೆ ನುಗ್ಗಿ, ವಿಜಯೇಂದ್ರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಹಲ್ಲೆಯಿಂದಾಗಿ ವಿಯಜೇಂದ್ರ ಶೆಟ್ಟಿ ಕೋಮಾಗೆ ಹೋಗಿದ್ದಾರೆ. ಅವರನ್ನು ಹೋಟೆಲ್ ಕೆಲಸಕ್ಕೆ ಬೆಳಿಗ್ಗೆ ಬಂದಂತ ಸಿಬ್ಬಂದಿ, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಮೂಲಕ ವಿಜಯೇಂದ್ರ ಶೆಟ್ಟಿ ಅವರು ಕಳೆದ ಕೆಲ ವರ್ಷಗಳಿಂದ ಮಂಜುನಾಥ ಟಿಫನ್ ಸೆಂಟರ್ ನಡೆಸುತ್ತಿದ್ದರು. ಬೆಳಿಗ್ಗೆ ಹೋಟೆಲ್ ಕೆಲಸಕ್ಕೆ ಬರುವಂತ ಸಿಬ್ಬಂದಿಗಾಗಿ ಕಿಟಕಿಯಲ್ಲಿ ಕೀ ಇಟ್ಟು ಹೋಟೆಲ್ ಒಳಗಡೆ ಮಲಗುತ್ತಿದ್ದರು.
ಆಶ್ರಮ ಶಾಲೆ, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ಸಹಿಸಲ್ಲ; ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ
ಮೋದಿ ಪ್ರಧಾನಿಯಾದ ಬೆನ್ನಲ್ಲೇ ಷೇರು ಮಾರುಕಟ್ಟೆ ಸಂಚಲನ : 5 ಟ್ರಿಲಿಯನ್ ಡಾಲರ್ ದಾಟಿದ ಮಾರುಕಟ್ಟೆ ಕ್ಯಾಪ್ | PM Modi