ಸ್ವೀಡನ್ನಲ್ಲಿ ಮಾನವ ನಾಗರಿಕತೆಯೇ ನಾಚುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ತನ್ನ ಪತ್ನಿಯನ್ನು ಬಲವಂತವಾಗಿ ಲೈಂಗಿಕವಾಗಿ 120ಕ್ಕೂ ಹೆಚ್ಚು ಪುರುಷರಿಗೆ ಮಾರಾಟ ಮಾಡುತ್ತಿದ್ದ 62 ವರ್ಷದ ವ್ಯಕ್ತಿಯ ವಿರುದ್ಧ ಸೋಮವಾರ (ಮಾರ್ಚ್ 30) ಅಧಿಕೃತವಾಗಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ.
ಆರೋಪಿ ವ್ಯಕ್ತಿಯು ಆನ್ಲೈನ್ನಲ್ಲಿ ಜಾಹೀರಾತುಗಳನ್ನು ನೀಡಿ, ತನ್ನ ಪತ್ನಿಯ ಲೈಂಗಿಕ ಸೇವೆಗಳಿಗಾಗಿ ಗ್ರಾಹಕರನ್ನು ಹುಡುಕುತ್ತಿದ್ದ. ಸುಮಾರು 120ಕ್ಕೂ ಹೆಚ್ಚು ಗ್ರಾಹಕರನ್ನು ಪೊಲೀಸರು ಗುರುತಿಸಿದ್ದು, ಈ ದಂಧೆಯ ಮೂಲಕ ಆತ ಭಾರಿ ಹಣ ಗಳಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.ಪತ್ನಿಯು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಲು ನಿರಾಕರಿಸಿದಾಗ, ಆಕೆಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ಪತ್ನಿಯ ಡ್ರಗ್ ಚಟದ ದುರುಪಯೋಗ ಮಾಡಿಕೊಂಡು ಆಕೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಆರೋಪಿಯು ತನ್ನ ಪತ್ನಿಗೆ ಬೆದರಿಕೆ ಹಾಕುವಾಗ ತನ್ನೊಳಗಿನ ‘ರಾಕ್ಷಸ’ನನ್ನು (The Monster) ಹೊರಹಾಕುವುದಾಗಿ ಹೆದರಿಸುತ್ತಿದ್ದ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕಾಗಿಯೇ ಈ ಪ್ರಕರಣವನ್ನು ಅತ್ಯಂತ ಕ್ರೂರ (Ruthless Exploitation) ಎಂದು ಬಣ್ಣಿಸಲಾಗಿದೆ. 2025ರ ಅಕ್ಟೋಬರ್ನಲ್ಲಿ ಪತ್ನಿಯು ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬಯಲಿಗೆ ಬಂದಿತ್ತು. ಅಂದಿನಿಂದ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.








