ಬೆಂಗಳೂರು: ಹನಿಟ್ರ್ಯಾಪ್ ವಿವಾದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಏಳಿಸಿದೆ. ಗಾಳ ಹಾಕಿದ್ದು ಒಬ್ಬ ಸಚಿವರಿಗಷ್ಟೇ ಅಲ್ಲ, ಇನ್ನೂ ಹಲವರಿಗೆ ಎನ್ನುವ ಮಾಹಿತಿ ಇದೆ. ಹೀಗಾಗಿ ವರಿಷ್ಟರಿಗೆ ವಿವರ ನೀಡಲು ಸಿಎಂ ಸಿದ್ಧರಾಮಯ್ಯ ದೆಹಲಿಗೆ ಪಯಣ ಬೆಳಸಲಿದ್ದಾರೆ ಎನ್ನಲಾಗುತ್ತಿದೆ.
ಹೌದು.. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತ್ರವಲ್ಲದೆ ರಾಜ್ಯ ಸಚಿವ ಸಂಪುಟದ ಇನ್ನೂ ಮೂರು ಮಂದಿಯನ್ನು ಹನಿ ಟ್ರ್ತಾಪ್ ಜಾಲಕ್ಕೆ ಸಿಲುಕಿಸಲು ಯತ್ನ ನಡೆದಿದ್ದು ಬಟಾ ಬಯಲಾಗಿದೆ. ರಾಜಧಾನಿ ಬೆಂಗಳೂರಿನ ಇಬ್ಬರು ಸಚಿವರು ಮತ್ತು ಮುಂಬೈ-ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರನ್ನು ಖೆಡ್ಡಾಗೆ ಕೆಡವಲು ಯತ್ನ ನಡೆಸಿದ್ದು ಸದನದಲ್ಲೇ ಹೊರಬಿದ್ದಿದೆ.
ಹನಿಟ್ರ್ಯಾಪ್ ನ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರಿನ ಓರ್ವ ಸಚಿವರು ಹನಿ ಟ್ರ್ಯಾಪ್ ಮಾಡಲು ಬಂದ ತಂಡವನ್ನು ಲಾಕ್ ಮಾಡಿದ್ದರು. ಹೀಗೆ ಲಾಕ್ ಆದ ಹನಿ ಟ್ರ್ಯಾಪ್ ತಂಡ ಧರ್ಮದೇಟು ಬೀಳುತ್ತಿದ್ದಂತೆಯೇ ಕಂಗಾಲು ಆಗಿದ್ದರು. ಹೀಗೆ ಕಂಗಾಲಾದ ಹನಿ ಟ್ರ್ತಾಪ್ ತಂಡದಿಂದ ಬಾಯ್ಬಿಡಿಸಿದ ಬೆಂಗಳೂರಿನ ಆ ಸಚಿವರು ಬಾಯ್ಬಿಡಿಸಿದ್ದು ಮಾತ್ರವಲ್ಲ ತಪ್ಪೊಪ್ಪಿಕೊಂಡ ಹನಿ ಟ್ರ್ಯಾಪ್ ತಂಡದಿಂದ ಇದರ ಸೂತ್ರಧಾರ ಯಾರೆಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಹನಿ ಟ್ರ್ತಾಪ್ ತಂಡ ಬಿಚ್ಚಿಟ್ಟ ಮಾಹಿತಿಯನ್ನು ವಿಡಿಯೋ ರೆಕಾರ್ಡ್ ಅನ್ನು ಬೆಂಗಳೂರಿನ ಸಚಿವರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತದನಂತರ ತಮ್ಮಂತೆಯೇ ಯಾರ್ಯಾರನ್ನು ಈ ಜಾಲಕ್ಕೆ ಬೀಳಿಸಲು ಯತ್ನ ನಡೆದಿದೆ ಎಂದು ಮಾಹಿತಿಯನ್ನು ಸಚಿವರು ಪಡೆದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ತದ ನಂತರ ಇತರ ಮೂವರು ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಲಾಗಿದೆ. ಈ ಕುರಿತು ಪಕ್ಷದ ವರಿಷ್ಟರ ಗಮನಕ್ಕೆ ತರುವಂತೆ ಒತ್ತಾಯ ಪಡಿಸಲಾಗಿದೆ. ಸಂಪುಟದ ನಾಲ್ವರು ಸದಸ್ಯರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಮಂಡಲ ಅಧಿವೇಶನ ಮುಗಿದ ನಂತರ ದಿಲ್ಲಿಗೆ ಧಾವಿಸಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿವರ ನೀಡಲು ಸಿಎಂ ಸಜ್ಜುಗೊಂಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಬೆಂಗಳೂರಲ್ಲಿ ಮತ್ತೊಂದು ಕಿರುಕುಳ ಪ್ರಕರಣ: ಪತಿ ಜೊತೆಗಿರಲು ರೂ.5000, ವಿಚ್ಛೇದನಕ್ಕೆ 45 ಲಕ್ಷ ಪತ್ನಿ ಬೇಡಿಕೆ
ರಾಜ್ಯದಲ್ಲಿ ಜೂನ್-ಸೆಪ್ಟೆಂಬರ್ ನಲ್ಲಿ ಮಾನ್ಸೂನ್ ಚುರುಕು: ಏಪ್ರಿಲ್-ಮೇ ತಿಂಗಳಲ್ಲೂ ಉತ್ತಮ ಮಳೆ ನಿರೀಕ್ಷೆ
BREAKING ಛತ್ತೀಸ್ ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ : 22 ಮಂದಿ ನಕ್ಸಲರ ಹತ್ಯೆ | Naxal Encounter