ಹಾಸನ: ಜಿಲ್ಲೆಯಲ್ಲಿ ಅಮಾಯಕರನ್ನು ಟಾರ್ಗೆಟ್ ಮಾಡಿ, ಹನಿಟ್ರ್ಯಾಪ್ ಮಾಡಿ, ಆ ಬಳಿಕ ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದಂತ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯ ಪೊಲೀಸರಿಂದ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಂತ ಹನಿಟ್ರ್ಯಾಪ್ ಗ್ಯಾಂಗ್ ಬಂಧಿಸಲಾಗಿದೆ. ಬಂಧಿತರನ್ನು ಅತಿಥಿ ಉಪನ್ಯಾಸಕಿ ನಾಗಲಕ್ಷ್ಮೀ ಹಾಗೂ ಪತಿ ಧರ್ಮರಾಜು ಆಲಿಯಾಸ್ ಫಣಿ ಸೇರಿದಂತೆ ನಾಲ್ವರಾಗಿದ್ದಾರೆ.
ಅತಿಥಿ ಉಪನ್ಯಾಸಕಿ ನಾಗಲಕ್ಷ್ಮೀ ಅವರೇ ಈ ಹನಿಟ್ರ್ಯಾಪ್ ಜಾಲದ ಕಿಂಗ್ ಪಿನ್ ಎನ್ನಲಾಗಿದೆ. ಬಡ, ಅಸಾಹಯಕ ಮಹಿಳೆಯರನ್ನು ಮುಂದಿಟ್ಟುಕೊಂಡು, ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದಂತ ಆರೋಪ ಬಂಧಿತರ ಮೇಲಿದೆ.
ಸಂತ್ರಸ್ತ ಮಹಿಳೆಯೊಬ್ಬರು ಮನೆಗೆ ಪರಿಚಯಸ್ಥ ವ್ಯಕ್ತಿಯೊಬ್ಬರು ತೆರಳಿದ್ದರು. ಇದೇ ಸಮಯದಲ್ಲಿ ಅವರಿಪ್ಪರ ಪೋಟೋ ತೆಗೆದು, ಆತನಿಗೆ ಕುಳುಹಿಸಿದ್ದರು. ಈ ವೇಳೆಗೆ ನಾಗಲಕ್ಷ್ಮಿ, ಆಕೆಯ ಗಂಡ ಮನೆಗೆ ತೆರಳಿ, ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಗೆ ಒತ್ತಾಯಿಸಿದ್ದರು.
ಅತ್ಯಾಚಾರ ಪ್ರಕರಣ ದಾಖಲಿಸೋದಕ್ಕೆ ಹಿಂದೇಟು ಹಾಕಿದಂತ ಸಂತ್ರಸ್ತ ಮಹಿಳೆಯನ್ನು ಹೊಳೆನರಸೀಪುರದಲ್ಲೇ ಲ್ಯಾಬ್ ನಡೆಸುತ್ತಿರುವ ನಾಗಲಕ್ಷ್ಮೀ ಪತಿ ಫಣಿ ಮನೆಗೆ ಕರೆಸಿಕೊಂಡು ಬಲವಂತವಾಗಿ ಖಾಸಗಿ ಅಂಗಾಂಗ ಮುಟ್ಟುತ್ತಾ ಮೆಡಿಕಲ್ ಪರೀಕ್ಷೆ ನಡೆಸಿದ ಆರೋಪವೂ ಕೇಳಿ ಬಂದಿತ್ತು.
ಇದೇ ವಿಷಯ ಇಟ್ಟುಕೊಂಡು ಸಂತ್ರಸ್ತೆ ಹಾಗೂ ವ್ಯಕ್ತಿಗೆ ಹಣ ನೀಡುವಂತೆ ನಾಗಲಕ್ಷ್ಮಿ, ಪತಿ ಪಣಿ ಬ್ಲಾಕ್ ಮೇಲ್ ಮಾಡಿದ್ದರು. ಹೀಗಾಗಿ ಇವರ ಕಾಟಕ್ಕೆ ಬೇಸತ್ತು ಸಂತ್ರಸ್ತ ಮಹಿಳೆ ಹೊಳೆನರಸೀಪುರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ನಾಲ್ವರ ವಿರುದ್ಧ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
BREAKING: ಬೆಳಗಾವಿಯಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ, ಮಗಳು ಸ್ಥಳದಲ್ಲೇ ಸಾವು








