ಬೆಂಗಳೂರು: ಸಚಿವ ಕೆಎನ್ ರಾಜಣ್ಣ ಅವರು ಸದನದಲ್ಲೇ ಹನಿಟ್ರ್ಯಾಪ್ ಆರೋಪ ಮಾಡಿದ್ದರು. ಇಂತಹ ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ದೂರು ನೀಡುವುದಾಗಿ ಸ್ಪಷ್ಟನೆ ನೀಡಿದರು. ಈ ಪ್ರಶ್ನೆಗೆ ಉತ್ತಿರಿಸಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹನಿಟ್ರ್ಯಾಪ್ ಆರೋಪದ ಬಗ್ಗೆ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಶೀಘ್ರವೇ ತನಿಖೆಗೆ ಆದೇಶಿಸಿವುದಾಗಿ ಘೋಷಿಸಿದರು.
ಇಲ್ಲಿಗೆ ಹನಿಟ್ರ್ಯಾಬ್ ಗೆ ಪುಲ್ ಸ್ಟಾಪ್ ಹಾಕಬೇಕು. ಇದು ಸದನದ ಎಲ್ಲಾ ಸದಸ್ಯರ ಮರ್ಯಾದೆಯ ಪ್ರಶ್ನೆಯಾಗಿದೆ. ಜನಪ್ರತಿನಿದಿಗಳ ಗೌರವ, ಘನಟೆಯನ್ನು ಉಳಿಸುವ ಅಗತ್ಯವಿದೆ. ಇದು ಒಬ್ಬರು ಇಬ್ಬರು ಸಚಿವರ ಹನಿಟ್ರ್ಯಾಪ್ ಅಲ್ಲ. ಇದು ಎಲ್ಲರ ಮರ್ಯಾದೆಯ ಪ್ರಶ್ನೆಯಾಗಿದೆ. ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.
BREAKING NEWS: ವಿಧಾನ ಪರಿಷತ್ತಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025ಕ್ಕೆ ಅಂಗೀಕಾರ
ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 900, ನಿಫ್ಟಿ 23,100 ಅಂಕ ಏರಿಕೆ | Sensex, Nifty Update