ಬೆಂಗಳೂರು: ಸಹಕಾರ ಸಚಿವ ರಾಜಣ್ಣ ವಿರುದ್ಧ ಸುಮೋಟೋ ಕೇಸ್ ಹಾಕಿ ಅವರ ಬಳಿಯಲ್ಲಿ 48 ಜನರ ಹೆಸರು ಬಾಯಿ ಬಿಡಿಸಬೇಕು. ಅದಕ್ಕಾಗಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಬಿಜೆಪಿ ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಣ್ಣ ಬಳಿಲ್ಲಿ 48 ಜನರ ಹೆಸರು ಬಾಯಿ ಬಿಡಿಸ್ಬೇಕು. ಮಂಪರು ಪರೀಕ್ಷೆ ಮಾಡಿಸಿ ಸತ್ಯ ಹೊರಗೆ ತರಬೇಕು. ರಾಜಣ್ಣ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಎಂದರು.
ಹನಿಟ್ರ್ಯಾಪ್ ಆಗಿದೆ ಎಂಬುದಾಗಿ ಕಲಾಪದಲ್ಲಿ ಹೇಳಿದ್ದಾರೆ. ಹೀಗೆ ಇದನ್ನು ಮುಚ್ಚಿ ಹಾಕಿದ್ರೇ ಬೇರೆ ಏನೇನೋ ಆಗಬಹುದು. ಅದಕ್ಕೂ ಮುನ್ನಾ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದರು.
ನನ್ನ ವಿರುದ್ಧ ಸಂಚು ರೂಪಿಸಿದ್ರು, ರಾಮೇಶ್ ಜಾರಕಿಹೊಳಿ ವಿರುದ್ಧ ಸಂಚು ಹೂಡಿದ್ರು. ರೇವಣ್ಣ ವಿರುದ್ಧ ರೇಪ್ ಕೇಸ್ ಹಾಕಿಸಿದ್ರು. ಸೂರಜ್ ರೇವಣ್ಣ, ನನ್ನ ಮೇಲೆ ಕೇಸ್ ಹಾಕಿದ್ರು. ಇದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ನೇರಹೊಣೆ ಎಂಬುದಾಗಿ ಡಿಕೆಶಿ ವಿರುದ್ಧ ಮುನಿರತ್ನ ಮತ್ತೆ ಕಿಡಿಕಾರಿದರು.