ಶಿವಮೊಗ್ಗ: ವಾಲಿಬಾಲ್ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಮುಂಬರುವ ಜನವರಿ 14, 2026ರಂದು ಸೊರಬ ತಾಲ್ಲೂಕಿನ ತಳೇಬೈಲಿನಲ್ಲಿ ಹೊನಲು ಬೆಳಕಿನ ಮ್ಯಾಟ್ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಂತ ತಂಡಕ್ಕೆ ಭರ್ಜರಿ ನಗದು ಬಹುಮಾವನ್ನು ನೀಡಲಾಗುತ್ತಿದೆ.
ಈ ಕುರಿತಂತೆ ಸೊರಬ ತಾಲ್ಲೂಕಿನ ತಳೇಬೈಲು ಗ್ರಾಮದ ಶ್ರೀ ಬಸವೇಶ್ವರ ಯುವಕರ ಗಳೆಯರ ಬಳಗದ ವಿನಾಯಕ ಮಾಹಿತಿ ನೀಡಿದ್ದು, ದಿನಾಂಕ 14-01-2026ರಂದು ಸಂಕ್ರಾಂತಿ ಪ್ರಯುಕ್ತ ಗ್ರಾಮಾಂತರ ಮಟ್ಟದ ಹೊನಲು ಬೆಳಕು ಮ್ಯಾಟ್ ವಾಲಿಬಾಲ್ ಪಂದ್ಯಾವಳಿಯನ್ನು ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಏರ್ಪಡಿಸಲಾಗಿದೆ ಎಂದಿದ್ದಾರೆ.
ದಿನಾಂಕ 14-01-2026ರಂದು ನಡೆಯುವಂತ ಹೊನಲು ಬೆಳಕಿನ ಮ್ಯಾಟ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆದ್ದಂತ ತಂಡಕ್ಕೆ ಎಸ್.ಬಂಗಾರಪ್ಪ ಟ್ರೋಫಿಯೊಂದಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ 15,000, ದ್ವಿತೀಯ ಬಹುಮಾನವಾಗಿ 10,000, ತೃತೀಯ ಬಹುಮಾನವಾಗಿ 6,000 ಹಾಗೂ ಚತುರ್ಥ ಬಹುಮಾನವಾಗಿ 3,000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಇದು ಮ್ಯಾಟ್ ಅಂಕಣದ ವಾಲಿಬಾಲ್ ಪಂದ್ಯಾವಳಿಯಾಗಿರುತ್ತದೆ. ಆಟಗಾರರಿಗೆ ಉಪಹಾರದ ವ್ಯವಸ್ಥೆಯನ್ನು ಶ್ರೀ ಬಸವೇಶ್ವರ ಯುವ ಗೆಳೆಯರ ಬಳಗದಿಂದ ಮಾಡಲಾಗಿದೆ. ಯಾವುದೇ ಅನಾಹುತಕ್ಕೆ ಊರಿನವರಾಗಲೀ, ಕಮಿಟಿಯವರು ಆಗಲೀ, ಜವಾಬ್ದಾರರು ಅಲ್ಲ. ಹೊನಲು ಬೆಳಕಿನ ಮ್ಯಾಟ್ ವಾಲಿಬಾಲ್ ಪಂದ್ಯಾವಳಿಯು ಸಂಜೆ 4 ಗಂಟೆಯಿಂದ ಆರಂಭವಾಗಲಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.
ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗಿಯಾಗುವಂತ ತಂಡಕ್ಕೆ ಪ್ರವೇಶ ಶುಲ್ಕವಾಗಿ ರೂ.800 ನಿಗದಿ ಪಡಿಸಲಾಗಿದೆ. ನೋಂದಾಯಿಸಿಕೊಳ್ಳೋದಕ್ಕೆ 9380546174 ಹಾಗೂ 9343828720ಗೆ ಸಂಪರ್ಕಿಸುವಂತೆ ಶ್ರೀ ಬಸವೇಶ್ವರ ಯುವ ಗೆಳೆಯರ ಬಳಗವು ತಿಳಿಸಿದೆ.
ಅಂದಹಾಗೇ ಈ ಪಂದ್ಯಾವಳಿಯನ್ನು ಸೊರಬ ತಾಲ್ಲೂಕಿನ ತಳೇಬೈಲು ಗ್ರಾಮದ ಬಸವೇಶ್ವರ ಯುವ ಗೆಳೆಯರ ಬಳಗದ ಸಂದೀಪ್, ನವೀನ್ ಕುಮಾರ್, ಸಂತೋಷ್, ಸಚಿನ್, ಚೇತನ್, ನವೀನ್, ಯುವರಾಜ್, ಸಂಪತ್ ಕುಮಾರ್, ಪ್ರಭು, ಜಗದೀಶ್, ಸುದೀಪ್, ಮಧು, ನಂದನ್, ಅಮಿತಾ ಸೇರಿದಂತೆ ಇತರರು ಜೊತೆಗೂಡಿ ಆಯೋಜಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಮಾಹಿತಿ ಹಕ್ಕು ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸಿ: ಆಯುಕ್ತ ರುದ್ರಣ್ಣ ಹರ್ತಿಕೋಟೆ ಖಡಕ್ ಸೂಚನೆ
BREAKING: ಡಿ.ಕೆ ಶಿವಕುಮಾರ್ ಗೆ ಸಿಎಂ ಪಟ್ಟ ಸಿಗುತ್ತೆ, ಆದ್ರೆ ಸಿಗುವ ಮುನ್ನ ಸಾಗುವ ದಾರಿ ಎಚ್ಚರವೆಂದು ದೈವವಾಣಿ








