ಸುದ್ದಿ ಕೃಪೆ: ಪ್ರಜಾಕಹಳೆ, ಕನ್ನಡ ದಿನಪತ್ರಿಕೆ ತುಮಕೂರು, ಸಂಪಾದಕರು : ರಘು ಎ.ಎನ್
ತುಮಕೂರು: ನಗರದಲ್ಲಿ ಯುವಕರು ಮಾದಕ ವ್ಯಸನಕ್ಕೆ ಮಾರುಹೋಗುತ್ತಿದ್ದು, ಗಾಂಜಾ, ಮತ್ತಿನ ಮಾತ್ರೆಯ ನತೆಯಲ್ಲಿ ತೇಲುತ್ತಿದ್ದು, ಡ್ರಗ್ಸ್ ಮುಕ್ತ ತುಮಕೂರು ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವ ಡ್ರಗ್ಸ್ ಮುಕ್ತ ತುಮಕೂರು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದು ಘೋಷಣೆಯಾಗಿಯೇ ಉಳಿದುಕೊಂಡಿದೆ.
ನಗರದಲ್ಲಿ ಗಾಂಜಾ ಸೇವನೆ ಪ್ರಕರಣಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದು, ಅಲ್ಲಲ್ಲಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದರು ಸಹ ಡ್ರಗ್ಸ್ ಮುಕ್ತ ತುಮಕೂರು ನಿರ್ಮಾಣ ಸಾಧ್ಯವಾಗುತ್ತಿಲ್ಲ, ದೊರಕುತ್ತಿರುವ ಗಾಂಜಾ ಪ್ರಮಾಣವೂ ಕಡಿಮೆ ಇದ್ದು, ಗಾಂಜಾ ಪೂರೈಕೆ ಜಾಲಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡರು ಸಹ ಗಾಂಜಾ ಜಾಲ ವಿಸ್ತಾರವಾಗಿ ಹರಡಿಕೊಂಡಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮಹಾರಾಷ್ಟ್ರ, ಆಂಧ್ರದ ಗಾಂಜಾಕ್ಕೆ ಬೇಡಿಕೆ: ಮಹಾರಾಷ್ಟ್ರದ ನಾಗುರ, ಸತಾರ ಜಿಲ್ಲೆಗಳಲ್ಲಿ ಗಾಂಜಾವನ್ನು ಯತೇಚ್ಛವಾಗಿ ರೈತರೇ ಬೆಳೆಯುತ್ತಾರೆ, ಇನ್ನೂ ಆಂಧ್ರ ಪ್ರದೇಶ ಅರಕು ಅರಣ್ಯ ಪ್ರದೇಶದಲ್ಲಿ ದೊರೆಯುವ ಗಾಂಜಾಕ್ಕೆ ನಗರದಲ್ಲಿ ಬೇಡಿಕೆ ಹೆಚ್ಚಿದ್ದು, ಲಾರಿ ಹಾಗೂ ರೈಲಿನ ಮೂಲಕ ಪೂರೈಸಲಾಗುತ್ತಿದೆ ಎನ್ನಲಾಗಿದೆ.
ನಗರಕ್ಕೆ ಪೂರೈಕೆಯಾಗುತ್ತಿರುವ ಗಾಂಜಾವನ್ನು ತಡೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಆಳವಾಗಿ ಬೇರೂರಿರುವ ಈ ಜಾಲವನ್ನು ನಿರ್ಮೂಲನೆಮತ್ತಿನ ಮಾತ್ರೆಯನ್ನು ರಿಂಗ್ ರಸ್ತೆಯಲ್ಲಿನ ಮೆಡಿಕಲ್ ಶಾಪ್ ವೊಂದರಿಂದ ಖರೀದಿ ಮಾಡುತ್ತಿದ್ದು, ಮತ್ತಿಗಾಗಿ ಸಾವಿರಾರು ರೂಪಾಯಿ ತೆತ್ತು ರೂಪಾಯಿ ಲೆಕ್ಕದಲ್ಲಿ ಸಿಗುವ ಮಾತ್ರೆಯನ್ನು ಯುವಕರು ಖರೀದಿಸುತ್ತಿದ್ದಾರೆ. ಮೆಡಿಕಲ್ ಶಾಪ್ ಮಾಲೀಕರಿಗೆ ಹುಡುಗರು ಹೇಳಿದ ಸ್ಥಳಕ್ಕೆ ಮಾತ್ರೆಯನ್ನು ಕೊಂಡೊಯ್ದು ನೀಡುತ್ತಿದ್ದಾರೆ. ಮಾಡದೇ ಹೋದರೆ ಉಡ್ತಾ ತುಮ ಕೂರು ಇನ್ನಷ್ಟು ಅಧ್ವಾನವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಗಾಂಜಾದೊಂದಿಗೆ ಸಿಗುತ್ತಿರುವ ಮತ್ತಿನ ಮಾತ್ರೆಯಹಿಂದೆ ಹುಡುಗರ ಬಿದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮತ್ತಿನ ಮಾತ್ರೆ ಹದಿಯರೆಯದ ಯುವಕರು ಮೆಡಿಕಲ್ ಶಾಪ್ ಗಳಲ್ಲಿ ದೊರಕುವ ಮತ್ತಿನ ಮಾತೆಯ ದಾಸರಾಗಿದ್ದು, ಮತ್ತಿನ ಮಾತ್ರೆಯನ್ನು ಕರಗಿಸಿ ಸಿರಂಜ್ ಮೂಲಕ ತೆಗೆದುಕೊಳ್ಳು ತ್ತಿರುವ ವಿಡಿಯೋ ಹಾಗೂ ಫೋಟೋಗಳು ಪ್ರಜಾಕಹಳೆಗೆ ಲಭ್ಯವಾಗಿವೆ. ಶೆಟ್ಟಿಹಳ್ಳಿ ರಿಂಗ್ ರಸ್ತೆಯ ಬಳಿಯ ಪ್ರತಿಷ್ಠಿತ ಕಾಲೇಜೊಂದರ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಸೇರುವ ಹುಡುಗರ ದಂಡು ಮತ್ತಿನ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಅದನ್ನು ದೇಹಕ್ಕೆ ಚುಚ್ಚಿಕೊಳ್ಳುತ್ತಿದ್ದಾರೆ. ಇದನ್ನು ಸ್ಥಳೀಯ ಪ್ರಶ್ನಿಸಿದರೆ
ಟೂಲ್ಸ್ (ಲಾಂಗ್, ಬಾಕು) ತೋರಿಸಿ ಹೆದರಿಸುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸದ ಸ್ಥಳೀಯರು ತಿಳಿಸಿದ್ದಾರೆ.
ರಿಂಗ್ ರಸ್ತೆಯ ಬಳಿಯೇ ಇರುವ ಇನ್ನೊಂದು ಆರ್ಯವೇದಿಕ್ ಆಸ್ಪತ್ರೆ ಬಳಿ, ಮರಳೂರು ದಿಣ್ಣೆ, ಗಂಗಸಂದ್ರ ಕೆರೆ, ಭೀಮಸಂದ್ರ ಕೆರೆ, ಮರಳೂರು ದಿಣ್ಣೆ ಹೀಗೆ ಹಲವು ಸ್ಥಳಗಳಲ್ಲಿ ಮಧ್ಯಾಹ್ನದ ವೇಳೆಗೆಲ್ಲ ಹುಡುಗರ ಗ್ಯಾಂಗ್ ಸೇರಿಕೊಂಡು ನಶೆಯಲ್ಲಿ ತೇಲುತ್ತಿರುತ್ತಾರೆ, ಇಂತಹ ಸಮಯದಲ್ಲಿ ಬರುವ ಕಾಲೇಜು ಹುಡುಗಿಯರನ್ನು ಚುಡಾಯಿಸುವುದಲ್ಲದೇ, ಮೊಬೈಲ್ ಕಿತ್ತುಕೊಂಡು ಕಳುಹಿಸುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಹುಡುಗರ ಹಾವಳಿಯನ್ನು ಸಹಿಸಲಾಗದೇ ಪೊಲೀಸರಿಗೆ ಮಾಹಿತಿ ನೀಡಿದರೆ ನಿಮಗ್ಯಾಕೆ ಸುಮೀರಿ? ಎಂದು ಉತ್ತರ ನೀಡಿ ಸುಮ್ಮನಾಗುತ್ತಾರೆ ಎಂದು ಸ್ಥಳೀಯರೊಬ್ಬರು ಪ್ರತಿಕೆಗೆ ತಿಳಿಸಿದ್ದು, ಪ್ರತಿದಿನ ಹುಡುಗುರು ಇಲ್ಲಿ ಸೇರಿಕೊಂಡು ಗಾಂಜಾ, ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯವಾಗಿದ್ದು, ಯಾರು ಸಹ ಇದಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪೈಲೇಟ್ ಯೋಜನೆಯನ್ನಾಗಿ ತುಮಕೂರು ಜಿಲ್ಲೆಯನ್ನು ಡ್ರಗ್ಸ್ ಮುಕ್ತಗೊಳಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಾರಂಭದ ದಿನಗಳಲ್ಲಿ ಘೋಷಣೆ ಮಾಡಿದ್ದರು. ಅದರಂತೆ ಪೊಲೀಸ್ ಇಲಾಖೆ ಅಲ್ಲೊಂದು ಇಲ್ಲೊಂದು ಗಾಂಜಾ ಸೇವನೆ ಪ್ರಕರಣದಲ್ಲಿ ಯುವಕರನ್ನು ಜೈಲಿಗೆ ಕಳುಹಿಸುತ್ತಿರುವುದು ಸಾಮಾನ್ಯವಾದರೂ ಗಾಂಜಾ ಪೂರೈಕೆ ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಪಷ್ಟ.