ಬೆಂಗಳೂರು: ಇಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಅಲ್ಲದೇ ಸಾಗರ ತಾಲ್ಲೂಕಿನ ಕಾನೂನು ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿದರು. ಅಲ್ಲದೇ ಕೆಲ ಬೇಡಿಕೆ ಈಡೇರಿಸಲು ಮನವಿ ಮಾಡಿದರು.
ಯಾವೆಲ್ಲ ಬೇಡಿಕೆ ಈಡೇರಿಸಲು ಮನವಿ ಗೊತ್ತಾ.?
* ಸಾಗರ ನಗರದ ವ್ಯಾಪ್ತಿಯು ವಿಶಾಲವಾಗಿದ್ದು, ಹೆಚ್ಚಿನ ಜನಸಂದಣಿಯಿಂದ ಸುರಳಿತ ಸಂಚಾರ ವ್ಯವಸ್ಥೆಗಾಗಿ ಮತ್ತು ವಾಹನಗಳ ಅಪಘಾತ ಪ್ರಕರಣವನ್ನು ತಪ್ಪಿಸುವ ಸಲುವಾಗಿ ಸಾಗರ ಪಟ್ಟಣಕ್ಕೆ ಹೊಸದಾಗಿ ಟ್ರಾಫಿಕ್ ಪೋಲಿಸ್ ಠಾಣೆಯನ್ನು ಮಂಜೂರು ಮಾಡಲು ಕೋರಿದರು.
* ಸಾಗರ ಪಟ್ಟಣದಿಂದ ದೂರವಿರುವ ತುಮರಿ-ಬ್ಯಾಕೊಡು ವ್ಯಾಪ್ತಿಯಲ್ಲಿ ಸಿಗಂಧೂರು ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ದಿನ ನಿತ್ಯ ಭೇಟಿ ನೀಡುತ್ತಿದ್ದು, ಕ್ಷೇತ್ರಕ್ಕೆ ಬರುವ ಪ್ರವಾಸಿಗಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ತುಮರಿ-ಬ್ಯಾಕೊಡು ಪ್ರದೇಶದಲ್ಲಿ ಹೊಸದಾಗಿ ಪೋಲಿಸ್ ಠಾಣೆ ಮಂಜೂರು ಮಾಡಲು ಮನವಿ ಮಾಡಿದರು.
* ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಗರ ನಗರ ಎನ್.ಹೆಚ್. ರಸ್ತೆಯ ಅಗಲೀಕರಣದ ಸಂಬಂಧ ಸಾಗರ ನಗರ ಪೋಲೀಸ್ ಠಾಣೆಯನ್ನು ಡೆಮಾಲಿಶಿಂಗ್ ಮಾಡಲಾಗುತ್ತಿದ್ದು, ಇದರ ಬದಲಿಗೆ ನೂತನ ಕಟ್ಟಡದ ಮಂಜೂರಾತಿ ನೀಡುವಂತೆ ಪ್ರಸ್ತಾವನೆಯನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಸಲ್ಲಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು