ಬೆಂಗಳೂರು: ಬಾಂಬ್ ಇಟ್ಟವನ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು ಶೀಘ್ರದಲ್ಲಿ ಆರೋಪಿಯನ್ನು ಬಂಧನ ಮಾಡಲಾಗುತ್ತದೆ ಅಂಥ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್ ರೋಹಿತ್ ನಾಯಕತ್ವಕ್ಕೆ ಮೆಚ್ಚುಗೆ!
ಅವರು ಇಂದು ನಗರದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ, ಇಲ್ಲಿ ತನಕ ಏನೆಲ್ಲ ನಡೆದಿದೆ ಎನ್ನುವುದನ್ನು ಚರ್ಚೆ ಮಾಡಲಾಗಿದ್ದು, ಮುಂದೆ ಏನೆಲ್ಲ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನೂ ತನಿಖೆಯನ್ನು ಅಂದೇ ಶುರು ಮಾಡಿದ್ದು, ತನಿಖೆಯನ್ನು ಎಲ್ಲಾ ದಿಕ್ಕಿನಲ್ಲಿ ಮಾಡಲಾಗುತ್ತಿದೆ. ಬಹಳ ಮಹತ್ವದ ಮಾಹಿತಿಗಳು ಲಭ್ಯವಾಗಲಿದ್ದು, ಅದನ್ನು ಉಪಯೋಗಿಸಿಕೊಂಡು ಶೀಘ್ರದಲ್ಲಿ ವ್ಯಕ್ತಿಯನ್ನು ಬಂಧನ ಮಾಡಲಾಗುತ್ತದೆ ಅಂತ ಹೇಳಿದರು. ಇದಲ್ಲದೇ ಘಟನೆ ಸಂಬಂಧ ಎನ್ಐಡ ಸೇರಿದಂತೆ ಇತರೆ ತನಿಖಾ ತಂಡಗಳು ತನಿಖೆ ನಡೆಸುತ್ತಿದ್ದೇವೆ. ಇದರೊಂದಿಗೆ ನಾವು ಶೀಘ್ರದಲ್ಲಿ ಆತನನ್ನು ಬಂಧನ ಮಾಡಲಿದ್ದೇವೆ ಅಂತ ಹೇಳಿದರು.
ಇನ್ನೂ ಬೆಂಗಳೂರು ಮಂದಿಯಾರು ಕೂಡ ಆಂತಕ ಪಡಬೇಕಾಗಿಲ್ಲ. ನಗರವನ್ನು ಸೂಕ್ತ ರೀತಿಯಲ್ಲಿ ಕಾಯಲಾಗುವುದು ಅಂತ ಹೇಳಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂಥ ಹೇಳಿದರು. ಇನ್ನೂ ಬೇಗನೇ ಆರೋಪಿಯನ್ನು ಬಂಧ ಮಾಡಲಾಗುವುದು ಅಂತ ಹೇಳಿದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ‘ಸಿಲ್ಲಿ ಪ್ರಕರಣ’: ವಿವಾದತ್ಮಕ ಹೇಳಿಕೆ ನೀಡಿದ ಸಚಿವ ಶರಣ ಪ್ರಕಾಶ್ ಪಾಟೀಲ್