ಕೇರಳ: ಡಾಕ್ಟರ್ ಅಂದ್ರೆ ದೇವರ ಸಮಾನ ಅನ್ನೋದು ಇದಕ್ಕೆ ಇರಬೇಕು. ಆ ಮೂಲಕ ಕೆಲವು ವೈದ್ಯರನ್ನು ಹೀಗಿರಬೇಕು ಅಂತ ಜನರು ಎದುರು ನೋಡುತ್ತಾರೆ. ಅವರಿಗೆಲ್ಲ ಡಿಫರೆಂಟ್ ಎನ್ನುವಂತೆ ಇವರಪ್ಪ ಡಾಕ್ಟರ್ ಅಂದ್ರೆ ಎನ್ನುವ ರೀತಿಯಲ್ಲಿ ಅಪಘಾತಗೊಂಡಿದ್ದ ವ್ಯಕ್ತಿಗೆ ರೋಡಲ್ಲೇ ಆಪರೇಷನ್ ಮಾಡಿ ಆತನ ಜೀವವನ್ನು ವೈದ್ಯರೊಬ್ಬರು ಉಳಿಸಿರುವಂತ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಚ್ಚಿಯಲ್ಲಿ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಾಯಗೊಂಡು ಒದ್ದಾಡುತ್ತಿದ್ದನು. ಆ ಮಾರ್ಗದಲ್ಲಿಯೇ ಸಾಗುತ್ತಿದ್ದಂತ ಮೂವರು ಯುವ ವೈದ್ಯರು ಲಭ್ಯವಿರುವಂತ ರೇಜರ್ ಬ್ಲೇಡ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿಕೊಂಡು ಗಾಯಾಳು ಯುವಕನಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ.
ಕೇರಳದ ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಂತ ಡಾ.ಬಿ ಮನೂಪ್, ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯ ಡಾ.ಥಾಮಸ್ ಪೀಟರ್ ಮತ್ತು ಡಾ.ಧಿಡಿಯಾ ಕೆ ಥಾಮಸ್ ಎಂಬುವರೇ ಈ ರೀತಿಯಾಗಿ ರಸ್ತೆಯಲ್ಲೇ ಅಪಘಾತದಿಂದ ಗಾಯಗೊಂಡಿದ್ದಂತ ಕೊಲ್ಲಂ ನಿವಾಸಿ ಲಿನು ಎಂಬಾತನಿಗೆ ಆಪರೇಷನ್ ಮಾಡಿ ಜೀವ ಉಳಿಸಿದ್ದಾರೆ.
ನಿನ್ನೆಯ ಭಾನುವಾರದ ರಾತ್ರಿ ಉದಯಂಪೇರೊರ್ ನಲ್ಲಿ ಕೊಲ್ಲಂ ನಿವಾಸಿ ಲಿನು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ವೈದ್ಯ ದಂಪತಿಗಳಾದಂತ ಥಾಮಸ್-ಧಿಡಿಯಾ ಹಾಗೂ ಡಾ.ಮನೂಪ್ ತೆರಳುತ್ತಿದ್ದರು. ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದಂತ ಲಿನು ಕಂಡು, ಆತ ಉಸಿರಾಟಕ್ಕೂ ತೊಂದರೆ ಪಡುತ್ತಿರುವುದು, ತುರ್ತು ಚಿಕಿತ್ಸೆಯನ್ನು ಎದುರು ನೋಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆತನಿಗೆ ರೋಡಲ್ಲೇ ಚಿಕಿತ್ಸೆಗೆ ಮುಂದಾಗಿದ್ದಾರೆ. ಇವರಿಗೆ ಪೊಲೀಸರು, ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ.
ಸ್ಥಳೀಯರು ನೀಡಿದಂತ ರೇಜರ್ ಬ್ಲೇಡ್ ಮತ್ತು ಪ್ಲಾಸ್ಟಿಕ್ ಸ್ಟ್ರಾ ಬಳಸಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಂತ ಗಾಯಾಳು ಲಿನುಗೆ ಕ್ರಿಕೋಥೈರಾಯ್ಡಮಿ ಶಸ್ತ್ರ ಚಿಕಿತ್ಸೆಯನ್ನು ರಾತ್ರಿಯಲ್ಲೂ ಸಾರ್ವಜನಿಕರು ನೆರವಾದಂತ ಮೊಬೈಲ್ ಬೆಳಕಿನಲ್ಲೇ ಮಾಡಿದ್ದಾರೆ. ಆ ಬಳಿಕ ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಿದ್ದು, ಇದೀಗ ಲಿನು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೈದ್ಯ ದಂಪತಿಗಳಾದಂತ ಥಾಮಸ್-ಧಿಡಿಯಾ ಹಾಗೂ ಡಾ.ಮನೂಪ್ ರೋಡಲ್ಲೇ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಂತ ಗಾಯಾಳುವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಜೀವ ಉಳಿಸಿದ್ದನ್ನು ಜನರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಆ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವೈದ್ಯ ಸೇವೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವೈದ್ಯರೆಂದರೇ ಹೀಗೆ ಇರಬೇಕು ಅಂತ ಪ್ರಶಂಸಿಸಿದ್ದಾರೆ.
BIG NEWS : ಚಿನ್ನದ ಮೇಲೆ ಸಾಲ ಪಡೆಯುವವರಿಗೆ `RBI’ ಬಿಗ್ ಶಾಕ್ : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 60% ಲೋನ್.!








