ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮಹತ್ವದ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಈ ತಿದ್ದುಪಡಿ ವಿದೇಯಕದ ಮೂಲಕ ರಾಜ್ಯದ ಮುಜರಾಯಿ ದೇವಸ್ಥಾನಗಳು ಕೊಡುತ್ತಿರುವಂತ ಆದಾಯವನ್ನು ದ್ವಿಗುಣಮಾಡಲಾಗಿದೆ.
ಇದಷ್ಟೇ ಅಲ್ಲದೇ ಮುಜರಾಯಿ ಇಲಾಖೆಯ ದೇಗುಲಗಳಲ್ಲಿ 10 ಲಕ್ಷದಿಂದ 1 ಕೋಟಿ ರೂ ಆದಾಯ ಹೊಂದಿರೋ ದೇಗುಲಗಳು ಶೇ.5ರಷ್ಟು ಹಣ ಸಲ್ಲಿಸಬೇಕು. 1 ಕೋಟಿಗೂ ಹೆಚ್ಚು ಆದಾಯ ಮೀರಿದ ದೇಗುಲಗಳು ಶೇ.10ರಷ್ಟು ಹಣ ಸಲ್ಲಿಸಬೇಕು ಎಂಬುದಾಗಿ ತಿದ್ದುಪಡಿ ವಿದೇಯಕದಲ್ಲಿ ತಿಳಿಸಲಾಗಿದೆ.
ಮುಜರಾಯಿ ಇಲಾಖೆಯ ದೇಗುಲಗಳ ಅರ್ಚಕರು, ಸಿಬ್ಬಂದಿಗೆ ಗುಡ್ ನ್ಯೂಸ್ ಎನ್ನುವಂತೆ ಸಿ-ಗ್ರೇಡ್ ದೇವಾಲಯದವರಿಗೆ ವಿಮೆ ಸೌಕರ್ಯ ಒದಗಿಸಲು ಬಿಲ್ ನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಅರ್ಚಕರು, ದೇಗುಲದ ಸಿಬ್ಬಂದಿಗಳಿ ಈ ವಿಮೆ ಸೌಲಭ್ಯ ಜಾರಿಯಾದ ನಂತ್ರ ಮೃತಪಟ್ಟಾಗ 5 ಲಕ್ಷ ರೂ ಪರಿಹಾರ ಸೀಗಲಿದೆ. ಈ ಮೂಲಕ 35000 ಸಾವಿರದಿಂದ ವಿಮಾ ಪರಿಹಾರವನ್ನು 5 ಲಕ್ಷಕ್ಕೆ ಹೆಚ್ಚಳ ಮಾಡಿದಂತೆ ಆಗಿದೆ.
ದೇಗುಲದ ಸಿಬ್ಬಂದಿ, ಅರ್ಚಕರಿಗೆ ಗುಡ್ ನ್ಯೂಸ್ ಎನ್ನುವಂತೆ ಮಕ್ಕಳ ಶಿಕ್ಷಣಕ್ಕಾಗಿ ನೀಡಲಾಗುತ್ತಿದ್ದಂತ ವಿದ್ಯಾರ್ಥಿ ವೇತನವನ್ನು 5 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಾಡುವಂತ ಅವಕಾಶವನ್ನು ಕಲ್ಪಿಸಲಾಗಿದೆ.
ಕೋಲಾರದಲ್ಲಿ ವಿದ್ಯುತ್ ಶಾಕ್ ನಿಂದ ಕಂಬದಲ್ಲೇ ಬೆಸ್ಕಾಂ ಗುತ್ತಿಗೆ ನೌಕರರ ಸಾವು