ಬೆಂಗಳೂರು: ರಾಜ್ಯ ಸರ್ಕಾರವು ಸಮುದಾಯಗಳ ತೀವ್ರ ಒತ್ತಡಕ್ಕೆ ಮಣಿದು, ಜಾತಿಗಣತಿ ನಮೂನೆಯಿಂದ ಹಿಂದೂ ಕ್ರೈಸ್ತಕ್ಕೆ ಕೋಕ್ ನೀಡಲಾಗಿದೆ. ಈ ಮೂಲಕ ಕ್ರೈಸ್ತ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕಕ್ಕೆ ಬ್ರೇಕ್ ಹಾಕಲಾಗಿದೆ.
ಇಂದು ಹಿಂದೂಳಿದ ಆಯೋಗದ ಅಧ್ಯಕ್ಷ ಮಧು ಸೂದನ್ ನಾಯಕ್ ಮತ್ತು ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿಯ ಪಟ್ಟಿಯಿಂದ 33 ಜಾತಿಗಳನ್ನು ತೆಗೆದಿರುವುದಾಗಿ ತಿಳಿಸಿದ್ದಾರೆ.
ಜಾತಿಗಣತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಎನ್ನುವುದು ನಮೂದಿ ಎಂಬುದಾಗಿ ಹೇಳಲಾಗಿತ್ತು. ಜೊತೆಗೆ ಜಾತಿ ಪಟ್ಟಿಯಲ್ಲೂ ಸೇರಿಸಲಾಗಿತ್ತು. ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿ, ಸಮುದಾಯಗಳ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗಾಗಿ 33 ಜಾತಿಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದು ಮಧುಸೂದನ ನಾಯಕ್ ತಿಳಿಸಿದ್ದಾರೆ.
ಯಾರು ಯಾವ ಜಾತಿ ಬೇಕಾದರೂ ಬರೆಸಬಹುದು. 1561 ಜಾತಿ ಬಿಟ್ಟು ಬೇರೆ ಯಾವುದೇ ಇದ್ದರೂ ಅದರ ಮಾಹಿತಿ ಕೊಡಬಹುದು. ನಾನು ಜಾತಿ ಹೇಳುವುದಿಲ್ಲ ಎಂದರೂ ಅದಕ್ಕೂ ಅವಕಾಶವಿದೆ. ಇತರೇ ಅಂತಲೂ ಕಾಲಂ ನೀಡಲಾಗಿದೆ. ಜನರು ಗೊಂದಲಕ್ಕೆ ಒಳಗಾಗಬಾರದು. ಗೊಂದಲವಿರುವಂತ ಜಾತಿಗಳ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದರು.