ಶಿವಮೊಗ್ಗ: ಬೆಳೆಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿಗಾಗಿ ಹೋರಾಡುತ್ತಿದೆ. ಇಂದಿಗೆ 7ನೇ ದಿನಕ್ಕೆ ಹೋರಾಟ ಕಾಲಿಟ್ಟಿದೆ. ನಾಳೆ ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘವು ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ. ರೈತರ ಹೋರಾಟಕ್ಕೆ ಪೂರಕವಾಗಿ ಸಾಗರ ಮತ್ತು ಶಿಕಾರಿಪುರದಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ.
ಇಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಾಳೆ ಬೆಳಗಾವಿಯಲ್ಲಿ ಕಬ್ಬಿಗೆ ಬೆಲೆ ನಿಗದಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಬೆಂಬಲಿಸಿ ನಾಳೆ ಸಾಗರದ ವರದಳ್ಳಿ ಕ್ರಾಸ್ ಬಳಿಯಲ್ಲಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವಂತ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತಿದೆ. ಕಬ್ಬು ಬೆಳೆಗಾರರಿಗೆ ಬೆಲೆ ನಿಗದಿ ಪಡಿಸುವುದಕ್ಕೂ ಈ ಮೂಲಕ ಆಗ್ರಹಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.
ನಾಳೆ ರೈತರು, ರೈತ ಸಂಘಟನೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು. ಇದು ಕರ್ನಾಟಕದ ಎಲ್ಲಾ ಕಬ್ಬು ಬೆಳೆಗಾರರ ಪರವಾಗಿ ನಡೆಯುತ್ತಿರುವಂತ ಹೋರಾಟವಾಗಿದೆ. ಸಾಗರ ತಾಲ್ಲೂಕಿನ ಜನತೆ ನಮ್ಮ ಪ್ರತಿಭಟನೆಗೆ ಕೈಜೋಡಿ, ಕಬ್ಬು ಬೆಳೆಗಾರರ ಬೆಳೆಗೆ ಬೆಲೆ ನಿಗದಿಪಡಿಸಲು ಒತ್ತಾಯ ಪಡಿಸುವಂತೆ ಮನವಿ ಮಾಡಿದ್ದಾರೆ.
ಈ ಗ್ಯಾಂಗ್ ಬಗ್ಗೆ ಹುಷಾರ್! ಮೈಮರೆತ್ರೆ ನಿಮ್ಮ ಆಭರಣ ಮಾಯ: ಸಾರ್ವಜನಿಕರಿಗೆ ‘ASP’ ಎಚ್ಚರಿಕೆ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








