ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಅರ್ಹಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಪ್ರೌಢಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಸಂಬಂಧ ದಿನಾಂಕ: 03.12.2024 ರಂದು ಅಪರಾಹ್ನ ನಿರ್ದೇಶಕರು, (ಪ್ರೌಢಶಿಕ್ಷಣ), ರವರ ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಸರೆನ್ಸ್ ಮುಖಾಂತರ ನಡೆದ ಸಭೆಯ ಸಭಾ ನಡಾವಳಿ
ಈ ಕೆಳಕಂಡ ಅಧಿಕಾರಿಗಳು ಸಭೆಗೆ ಭಾಗವಹಿಸಿರುತ್ತಾರೆ.
1. ಶ್ರೀ ಕೃಷ್ಣಾಜಿ ಕರಿಚಣ್ಣವರ ನಿರ್ದೇಶಕರು (ಪ್ರೌಢಶಿಕ್ಷಣ), ಆಯುಕ್ತರ ಕಛೇರಿ, ಬೆಂಗಳೂರು
2. ಸಹನಿರ್ದೇಶಕರುಗಳು (ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗೀಯ ಕಛೇರಿ), ಶಾಲಾ ಶಿಕ್ಷಣ ಇಲಾಖೆ.
3. ಸಹನಿರ್ದೇಶಕರುಗಳು, ಅಪರ ಆಯುಕ್ತರ ಕಚೇರಿ, ಕಲಬುರಗಿ ಮತ್ತು ಧಾರವಾಡ.
4. ಉಪನಿರ್ದೇಶಕರು (ಪ್ರೌಢಶಿಕ್ಷಣ), ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
5. ಹಿರಿಯ ಸಹಾಯಕ ನಿರ್ದೇಶಕರು (ಇ-ಆಡಳಿತ) ಆಯುಕ್ತರ ಕಛೇರಿ, ಶಾಶಿಇ, ಬೆಂಗಳೂರು.
6. ಹಿರಿಯ ಸಹಾಯಕ ನಿರ್ದೇಶಕರು, ಇ.ಇ.ಡಿ.ಎಸ್ ಶಾಖೆ, ಆಯುಕ್ತರ ಕಛೇರಿ, ಶಾಶಿಇ, ಬೆಂಗಳೂರು.
7 . ಸಹಾಯಕ ನಿರ್ದೇಶಕರು, ಸಿಬ್ಬಂದಿ ಶಾಖೆ-1, ಆಯುಕ್ತರ ಕಛೇರಿ, ಶಾಶಿಇ, ಬೆಂಗಳೂರು.
8. ಅಧೀಕ್ಷಕರು ಮತ್ತು ಸಿಬ್ಬಂದಿ, ಪದವಿ ಪೂರ್ವ ಶಿಕ್ಷಣ ಇಲಾಖೆ.
ಪ್ರಾರಂಭದಲ್ಲಿ ನಿರ್ದೇಶಕರು(ಪ್ರೌಢ ಶಿಕ್ಷಣ), ರವರು ಸಭೆಯಲ್ಲಿ ಹಾಜರಿದ್ದ ಸರ್ವರನ್ನು ಸ್ವಾಗತಿಸಿದರು ಹಾಗೂ ಪ್ರಸಕ್ತ ಸಭೆಯ ಉದ್ದೇಶವನ್ನು ಈ ಕೆಳಕಂಡ ಅಂಶಗಳೊಂದಿಗೆ ಸಭೆಗೆ ತಿಳಿಸಿದರು.
1. ಸರ್ಕಾರದ ಪತ್ರ ಸಂಖ್ಯೆ: ಇಪಿ 164 ಎಸ್‌ಒಹೆಚ್ 2023, ದಿನಾಂಕ: 23.10.2024 ರಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಸ್ನಾತಕೋತ್ತರ ಪದವಿ ಪಡೆದಿರುವ ಅರ್ಹ ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಪಟ್ಟಿಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 7-A ರಡಿ ಸಿದ್ದಪಡಿಸಲು ಆದೇಶವಾಗಿರುತ್ತದೆ.
1. ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 7-A ಈ ಕೆಳಕಂಡಂತಿದೆ. 7-A (1) Subject to the provisions of these rules, seniority inter-se of persons, to be included in the State wise list of seniority consequent upon posts included in the district wise cadres being included in the state wise cadre, shall be determined by the total length of continuous service of the official in the district-wise cadre from the date of his appointment to such eadre;
Provided that where two or more persons are appointed to the district wise cadres on the same date and their total length of continuous service in such cadre is equal, then the inter-se-seniority of such persons shall be determined by the authority competent to prepare the State-wise list.
(i) Where such persons are promoted from a lower cadre, on the basis of their total length of continuous service in the post in the lower cadre from which they were promoted’
(ii) Where such persons are directly recruited to the district-wise cadre, on the basis of their basis of their relative age, the older in age being considered as senior to the younger.
2. The provisions of sub-rule(1)shall mutatis mutandis apply for the determination of Seniority:
(i) where a State-wise list is prepared consequent upon posts included in Division-wise cadres being included in the State-wise, as if the said sub- rule, for the words “district-wise cadre”. the words “Division-wise cadres” had been substituted.
(ii) Where a Division-wise list is prepared consequent upon posts included in District-wise Cadres being included in a Division-wise cadre, as if in said sub-rule, for the words “State-wise cadre” the word “division-wise cadre” had been substituted.
ಮೇಲ್ಕಂಡ ಆದೇಶದಂತೆ ಜೇಷ್ಠತೆಯ ವಿಭಾಗವಾರು ಕೇಡರುಗಳಿಂದ ಸ್ನಾತಕೋತ್ತರ ಪದವಿ ಹೊಂದಿರುವ ರಾಜ್ಯವಾರು ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸುವುದು ಎಂದು ತೀರ್ಮಾನಿಸಲಾಯಿತು.
ಸದರಿ ಪತ್ರದಂತೆ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿ ಸಿದ್ದಪಡಿಸುವ ಸಂಬಂಧ ಶಿಕ್ಷಕರ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ವಿಭಾಗೀಯ ಸಹನಿರ್ದೇಶಕರೊಂದಿಗೆ ಚರ್ಚಿಸಲಾಯಿತು. ಶಿಕ್ಷಕರ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ಸಂಗ್ರಹಿಸುವ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದವರೆಲ್ಲರೂ ಒಪ್ಪಿಗೆ ಸೂಚಿಸಿದರು ಹಾಗೂ ಈ ಅಂಶಗಳನ್ನೊಳಗೊಂಡಂತೆ ಮಾಹಿತಿ ಸಂಗ್ರಹಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಭಾಗವಹಿಸಿದ್ದವರೂ ಕೂಡಾ ಸಹಮತಿ ನೀಡಿದರು.