ನವದೆಹಲಿ: ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಆನ್‌ಲೈನ್ ಗೇಮಿಂಗ್ ಉದ್ಯಮವನ್ನು ಸಂಪೂರ್ಣವಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಹೈ-ಅನಿಮೇಟೆಡ್ ಅಥವಾ ಹೈ-ಎಂಡ್, ಇಂಟರ್ ಆಕ್ಟಿವ್ ಗೇಮ್ ಗಳನ್ನು ಆಡಲು ಇನ್ನು ಮುಂದೆ ದುಬಾರಿ ಗ್ಯಾಜೆಟ್‌ಗಳು ಅಗತ್ಯ ಇರುವುದಿಲ್ಲ. ಜಿಯೋ ಕ್ಲೌಡ್ ಗೇಮಿಂಗ್ ತಂತ್ರಜ್ಞಾನದ ಮೂಲಕ ಆನ್‌ಲೈನ್‌ನಲ್ಲಿ ಕ್ಲೌಡ್ ಗೇಮ್ ಗಳನ್ನು ಆಡಲು, ಬಳಕೆದಾರರಿಗೆ ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಜಿಯೋಗೇಮ್ಸ್ ಅಪ್ಲಿಕೇಷನ್ ಇದ್ದರೆ ಸಾಕು.
ಲ್ಯಾಪ್‌ಟಾಪ್‌ಗಳು, ಪಿಸಿಗಳು, ಸ್ಮಾರ್ಟ್‌ಫೋನ್‌ಗಳು, ಜಿಯೋ ಸೆಟ್-ಟಾಪ್ ಬಾಕ್ಸ್‌ಗಳು ಮತ್ತು ವೆಬ್ ಬ್ರೌಸರ್‌ಗಳಲ್ಲಿ ಗೇಮಿಂಗ್ ಮಾಡಬಹುದು ಮತ್ತು ಇವೆಲ್ಲಕ್ಕೂ ಏನನ್ನೂ ಡೌನ್‌ಲೋಡ್ ಮಾಡುವ ಅಗತ್ಯ ಇಲ್ಲ. ಕೇವಲ ಒಂದು ಗೇಮ್ ಆಯ್ಕೆ ಮಾಡಿ ಮತ್ತು ಆಡಲು ಪ್ರಾರಂಭಿಸಿ. ಟೆಕ್ಕನ್ 7, ಎಲ್ಡನ್ ಮತ್ತು ರಿಂಗ್‌ನಂತಹ ಟ್ರಿಪಲ್-ಎ ಟೈಟಲ್ ಗಳನ್ನು ಈಗ ಜಿಯೋ ಕ್ಲೌಡ್ ತಂತ್ರಜ್ಞಾನದ ಮೂಲಕ ಸುಲಭವಾಗಿ ಆಡಬಹುದು.
ಗೇಮರ್ ಗಳು ರೂ. 298ಕ್ಕೆ ಜಿಯೋಗೇಮ್ಸ್ ಅಪ್ಲಿಕೇಷನ್ ಪ್ಲಾನ್ ಪಡೆಯಬಹುದು. 28 ದಿನಗಳ ಮಾನ್ಯತೆಯೊಂದಿಗೆ ಅವರು ಜಿಯೋಗೇಮ್ಸ್‌ನಲ್ಲಿ ಲಭ್ಯವಿರುವ 500 ಆನ್‌ಲೈನ್ ಗೇಮ್ ಗಳನ್ನು ಆಡಲು ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ ಗೇಮರ್ ಗಳು ಈ ಸ್ಟೀಮ್‌ನಿಂದ ತಮ್ಮ ನೆಚ್ಚಿನ ಆಟಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಜಿಯೋದ ಕ್ಲೌಡ್ ಗೇಮಿಂಗ್ ತಂತ್ರಜ್ಞಾನಕ್ಕೆ ಸೇರ್ಪಡೆ ಮಾಡಬಹುದು. ಇದರರ್ಥ ಇಡೀ ಆಟವನ್ನು ಈಗ ಜಿಯೋದ ಕ್ಲೌಡ್ ಗೇಮಿಂಗ್‌ಗೆ ವರ್ಗಾಯಿಸಲಾಗುತ್ತದೆ. ಜಿಯೋದ ಕ್ಲೌಡ್ ಗೇಮಿಂಗ್ ತಂತ್ರಜ್ಞಾನವು ಉನ್ನತ ಮಟ್ಟದ ಆನ್‌ಲೈನ್ ಗೇಮಿಂಗ್‌ಗಾಗಿ ದುಬಾರಿ ಕನ್ಸೋಲ್‌ಗಳ ಅಗತ್ಯವನ್ನು ಇಲ್ಲದಂತೆ ಮಾಡುತ್ತದೆ. ಯಾವುದೇ ಬ್ಲೂಟೂತ್ ರಿಮೋಟ್ ಜಿಯೋಗೇಮ್ಸ್ ಅನ್ನು ಗೇಮಿಂಗ್ ಕನ್ಸೋಲ್ ಆಗಿ ಪರಿವರ್ತಿಸುತ್ತದೆ. ಜಿಯೋಗೇಮ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ರೂ. 48 ರ ಪ್ರೊ-ಪಾಸ್ ಚಂದಾದಾರಿಕೆ ಸಹ ಲಭ್ಯವಿದೆ, ಇದು ಮೂರು ದಿನಗಳವರೆಗೆ ಮಾನ್ಯವಾಗಿರುತ್ತದೆ.
ಜಿಯೋದ ಕ್ಲೌಡ್ ಗೇಮಿಂಗ್ ತಂತ್ರಜ್ಞಾನವು ದೇಶದಲ್ಲಿ ಇ-ಸ್ಪೋರ್ಟ್‌ಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ರಿಲಯನ್ಸ್ ಜಿಯೋ ಈ ಕ್ಲೌಡ್ ಗೇಮಿಂಗ್ ತಂತ್ರಜ್ಞಾನವನ್ನು ಪ್ರದರ್ಶಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 9.15 ಲಕ್ಷ ಕುಟುಂಬಗಳ ಸಮೀಕ್ಷೆ
ಜಾತಿಗಣತಿ ಸಮೀಕ್ಷೆ: ಹೀಗಿದೆ ರಾಜ್ಯ, ಬೆಂಗಳೂರಿನ ಪ್ರಗತಿಯ ಅಂಕಿ-ಅಂಶ ವಿವರ