ಬೆಂಗಳೂರು: ನಗರದ ಜೆಪಿ ನಗರದಲ್ಲಿರುವಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿವಾಸದ ಮುಂದೆ ಜೆಡಿಎಸ್ ಮುಖಂಡರ ಹೈಡ್ರಾಮಾವೇ ನಡೆದಿದೆ. ಚನ್ನಪಟ್ಟಣ ಬಿಟ್ಟು ಹೋಗದಂತೆ ಜೆಡಿಎಸ್ ಮುಖಂಡರು ಕೈ ಕೊಯ್ದುಕೊಂಡು ಹೈಡ್ರಾಮಾವನ್ನೇ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಇಂದು ಸಂಜೆಯೊಳಗೆ ಅಧಿಕೃತವಾಗಿ ಆ ಬಗ್ಗೆ ಕುಮಾರಸ್ವಾಮಿ ಘೋಷಣೆ ಕೂಡ ಮಾಡಲಿದ್ದಾರೆ.
ಈ ವಿಷಯವನ್ನು ಅರಿತಂತ ರಾಮನಗರ, ಚನ್ನಪಟ್ಟಣದ ಜೆಡಿಎಸ್ ಮುಖಂಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ಆಗಮಿಸಿ, ಚನ್ನಪಟ್ಟಣ ಬಿಟ್ಟು ಹೋಗದಂತೆ ಆಗ್ರಹಿಸಿ ಒತ್ತಾಯಿಸಿದರು.
ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗದಂತೆ ಆಗ್ರಹಿಸಿದಂತ ಜೆಡಿಎಸ್ ಮುಖಂಡರೊಬ್ಬರು ಕೈಯನ್ನು ಕೊಯ್ದುಕೊಂಡು ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಈ ಮೂಲಕ ಹೆಚ್.ಡಿಕೆ ನಿವಾಸದ ಮುಂದೆ ಇಂದು ಹೈಡ್ರಾಮಾವೇ ನಡೆಯಿತು.
ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲಿ ಶೇ.75 ಕ್ಕಿಂತ ಹೆಚ್ಚಳ : ಇದೇ ಮೊದಲ ಬಾರಿಗೆ 1,300 ದಾಟಿದ ಸಿರಿವಂತರ ಸಂಖ್ಯೆ!
BREAKING: ಬಿಗ್ ಬಾಸ್ ಕನ್ನಡ ಖ್ಯಾತಿಯ ‘ಸೋನು ಶ್ರೀನಿವಾಸಗೌಡ’ಗೆ ’14 ದಿನ’ ನ್ಯಾಯಾಂಗ ಬಂಧನ, ಜೈಲುಪಾಲು